×
Ad

ಬೀದರ್ | ಕರ್ನಾಟಕ ವೈದ್ಯ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2025-02-16 17:23 IST

ಬೀದರ್ : ವೈದ್ಯರಿಗೆ ಕರ್ನಾಟಕ ವೈದ್ಯ ರತ್ನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಕರ್ನಾಟಕ ಜೀವವೈವಿದ್ಯ ಮಂಡಳಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಪಾರಂಪರಿಕ ವೈದ್ಯ ಪರಿಷತ್ತು ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಬರುವ ಮಾ.2, 3 ಮತ್ತು 4 ರಂದು ನಗರದಲ್ಲಿ ರಾಜ್ಯಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ ಆಯೋಜಿಸಲಾಗುತ್ತಿದೆ. ಇದರಿಂದಾಗಿ ವೈದ್ಯರಿಗೆ ಕರ್ನಾಟಕ ವೈದ್ಯ ರತ್ನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಮ್ಮೇಳನದಲ್ಲಿ ಐದು ಜನ ಪಾರಂಪರಿಕ ವೈದ್ಯರಿಗೆ ಕರ್ನಾಟಕ ವೈದ್ಯ ರತ್ನ ಪ್ರಶಸ್ತಿ ನೀಡಲಾಗುತ್ತದೆ. ಕನಿಷ್ಠ 20 ವರ್ಷ ಪಾರಂಪರಿಕ ವೈದ್ಯ ಕ್ಷೇತ್ರದಲ್ಲಿ ಗಣನೀಯ ಸೇವೆಗೈದ ಪಾರಂಪರಿಕ ವೈದ್ಯರು ತಮ್ಮ ಹೆಸರು, ಪೂರ್ಣ ವಿಳಾಸ, ಪಾರಂಪರಿಕ ಗುರುವಿನಲ್ಲಿ ಅಭ್ಯಾಸ, ಗಮನಾರ್ಹ ಸೇವೆ ಹಾಗೂ ಸಾಧನೆಗಳ ಕುರಿತು ಸಮಗ್ರ ದಾಖಲಾತಿಗಳ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬೇಕಾಗಿದೆ.

ಅರ್ಜಿಯನ್ನು ಕೆಇಬಿ ರಸ್ತೆಯ ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ ಸಮಿತಿ, ಸಾಮಾಜಿಕ ಅರಣ್ಯ ವಿಭಾಗ ಐಎಂಎ ಹಾಲ್ ಎದುರುಗಡೆ ಬಿದರ್ ಈ ವಿಳಾಸಕ್ಕೆ ತಲುಪಿಸಬೇಕಿದೆ. ಅರ್ಜಿಯು ಫೆ.22 ರ ಒಳಗಾಗಿ ತಲುಪುವಂತೆ ಕಳುಹಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News