×
Ad

ಬೀದರ್ | ಪರಿಶಿಷ್ಟ ಪಂಗಡದ ಇಂಜಿನಿಯರಿಂಗ್ ಪದವಿಧರರಿಗೆ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

Update: 2025-04-25 20:10 IST

ಬೀದರ್ : ಐಐಎಸ್‌ಸಿ, ಐಐಟಿ ಮತ್ತು NIT ಸಂಸ್ಥೆಗಳ ಮೂಲಕ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಂಡ್ ಮಷೀನ್ ಲರ್ನಿಂಗ್ ವೃತ್ತಿಪರ ತರಬೇತಿ ಕೋರ್ಸುಗಳಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡದ ಇಂಜಿನಿಯರಿಂಗ್ ಪದವಿಧರರಿಗೆ ಶಿಷ್ಯವೇತನ, ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿಯನ್ನು ಎಲ್ಲಾ ದಾಖಲಾತಿಗಳೊಂದಿಗೆ ಎ.25 ರ ಒಳಗಾಗಿ ಜಿಲ್ಲಾ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಕಚೇರಿ ವೇಳೆಯಲ್ಲಿ ಸಲ್ಲಿಸಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಸಂಪರ್ಕಿಸಿ ವಿವರಗಳು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News