ಬೀದರ್ | ಕನ್ನಡ ಕಲಿಯುವುದಕ್ಕೆ ಕನ್ನಡೇತರರಿಂದ ಅರ್ಜಿ ಆಹ್ವಾನ
ಬೀದರ್ : 2025-26ನೇ ಸಾಲಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನ್ನಡೇತರರಿಗೆ ಕನ್ನಡ ಕಲಿಸುವ ವಿನೂತನ ಕಾರ್ಯಕ್ರಮ ವ್ಯಾಪಕಗೊಳಿಸಲು ತೀರ್ಮಾನಿಸಲಾಗಿದ್ದು, ಕನ್ನಡೇತರ ಅಥವಾ ಅನ್ಯ ಭಾಷಿಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಡಳಿತ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕೇಂದ್ರೋದ್ಯಮ, ಬ್ಯಾಂಕು, ಕೇಂದ್ರ ಸರಕಾರಿ ಕಚೇರಿ ಹಾಗೂ ವಸತಿ ಸಮುಚ್ಛಯಗಳಲ್ಲಿ ಕೆಲಸ ಮಾಡುವ ಕನ್ನಡೇತರ ಅಥವಾ ಅನ್ಯ ಭಾಷಿಕರಿಗೆ ವಾರಕ್ಕೆ 3 ದಿನದಂತೆ ಪ್ರತಿ ದಿನ 1 ಗಂಟೆ 3 ತಿಂಗಳ ಅವಧಿಗೆ ತರಬೇತಿ ನಡೆಸಲು 30 ಶಿಬಿರಾರ್ಥಿಗಳ ಆಯ್ಕೆಗಾಗಿ ಅರ್ಜಿ ಅಹ್ವಾನಿಸಲಾಗಿದೆ. ಪ್ರಾಧಿಕಾರವು ವೈಜ್ಞಾನಿಕ ಪಠ್ಯಕ್ರಮವನ್ನು ರೂಪಿಸಿದ್ದು, ತರಬೇತಿ ಹೊಂದಿದ ಶಿಕ್ಷಕರಿಂದ ಬೋಧನೆ ಮಾಡಿಸಲು ಪ್ರಯತ್ನಿಸಲಾಗುತ್ತಿದೆ.
ಆಸಕ್ತ ಶಿಬಿರಾರ್ಥಿಗಳು ಅರ್ಜಿ ನಮೂನೆಯನ್ನು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು, ಅರ್ಜಿ ಭರ್ತಿ ಮಾಡಿ ಜೂ.22 ರ ಒಳಗಾಗಿ ಪೋಸ್ಟ್, ಕೋರಿಯರ್ ಮೂಲಕ ಸಲ್ಲಿಸಬಹುದು. ಇಲ್ಲದಿದ್ದರೆ ನೇರವಾಗಿ ಕಚೇರಿಗೆ ಬಂದು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.