ಬೀದರ್ | ದಲಿತ ವಿದ್ಯಾರ್ಥಿ ಪರಿಷತ್ ಸಮಿತಿಯ ತಾಲ್ಲೂಕು ಪದಾಧಿಕಾರಿಗಳ ನೇಮಕ
Update: 2025-02-27 19:37 IST
ಬೀದರ್ : ಬುಧವಾರ ಭಾಲ್ಕಿಯ ಪ್ರವಾಸಿ ಮಂದಿರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮತ್ತು ಕಾರ್ಯಕರ್ತರ ಸಭೆಯಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ತಾಲ್ಲೂಕು ಸಂಚಾಲಕರಾಗಿ ಮಹಾದೇವ, ಸಹ ಸಂಚಾಲಕ ರವಿ ಭಾವಿದೊಡ್ಡಿ, ಸಂಘಟನಾ ಸಂಚಾಲಕ ಅಭಿಷೇಕ್ ಕೋಕಣೆ, ಪ್ರಧಾನ ಕಾರ್ಯದರ್ಶಿ ನಿಖಿಲ್ ಲಾಮಲೇ, ಸಹ ಕಾರ್ಯದರ್ಶಿ ವಿಶ್ವ ಕಾಂಬಳೆ ಹಾಗೂ ಸಂಪರ್ಕ ಕಾರ್ಯದರ್ಶಿಯಾಗಿ ಪ್ರಥ್ವಿರಾಜ್ ಅವರು ನೇಮಕಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಸಂದೀಪ್ ಕಾಂಟೆ, ಸಂದೀಪ್ ವಾಲದೊಡ್ಡಿ, ಸೈನಿಲ್ ಬಂಧು, ಅಮರನಾಥ್ ಹುಡಗೆ, ಕರಣ್, ಹರ್ಷವರ್ಧನ್, ವಿಶಾಲ್ ಬಂಧು ಹಾಗೂ ಅನಿಕೇತ್, ಸೇರಿದಂತೆ ಇತರರು ಹಾಜರಿದ್ದರು.