×
Ad

ಬೀದರ್ | ಸರಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ ಬಸವೇಶ್ವರ ಎಂಟರ್‌ಪ್ರೈಸಸ್ ಕಪ್ಪುಪಟ್ಟಿಗೆ ಸೇರಿಸಿ : ಝರೆಪ್ಪ ಬೆಲ್ಲಾಳೆ

Update: 2025-09-16 21:05 IST

ಬೀದರ್, ಸೆ.16: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಆಹಾರ ಸರಬರಾಜು ಮಾಡುತ್ತಿದ್ದ ಬಸವೇಶ್ವರ ಎಂಟರಪ್ರೈಸಸ್‌ ಅನ್ನು ತಕ್ಷಣವೇ ಕಪ್ಪುಪಟ್ಟಿಗೆ ಸೇರಿಸಬೇಕೆಂದು ಝರೆಪ್ಪ ಬೆಲ್ಲಾಳೆ ಆಗ್ರಹಿಸಿದ್ದಾರೆ.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 2021–22ರಲ್ಲಿ ಟೆಂಡರ್ ದರಕ್ಕಿಂತ ಹೆಚ್ಚಿನ ಮೊತ್ತ ಬಿಲ್ಲಿನಲ್ಲಿ ನಮೂದಿಸಿ 13,81,383 ಲಕ್ಷ ರೂ. ಲೂಟಿ ಮಾಡಿರುವುದು ದಾಖಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದ್ದರೂ, ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದನ್ನು ಅವರು ಖಂಡಿಸಿದರು.

2024ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸೂಚನೆ ನೀಡಿದರೂ, ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದರು.

ಹಿರಿಯ ದಲಿತ ಮುಖಂಡ ವೈಜಿನಾಥ್ ಸೂರ್ಯವಂಶಿ ಮಾತನಾಡಿ, ಸಂಘಟನೆಗಳು ಸಮಾಜ ಪರವಾಗಿ ಕೆಲಸ ಮಾಡುವ ಬದಲು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗವಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಯಾನಂದ್ ನವಲೆ, ವಿಜಯಕುಮಾರ್ ಜಂಜಿರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News