ಬೀದರ್ | ಮಾಂಜ್ರಾ ನದಿಗೆ ಬಿದ್ದ ವ್ಯಕ್ತಿಯ ಮೃತದೇಹ ಪತ್ತೆ
Update: 2025-09-12 15:42 IST
ಬೀದರ್ : ಭಾಲ್ಕಿ ತಾಲೂಕಿನ ಹಲಸಿತೂಗಾಂವ್ ಗ್ರಾಮದ ಬಳಿ ಇರುವ ಮಾಂಜ್ರಾ ನದಿಗೆ ವ್ಯಕ್ತಿಯೊರ್ವ ಕುಡಿದ ಅಮಲಿನಲ್ಲಿ ಗುರುವಾರ ಬಿದಿದ್ದು, ಇವತ್ತು ಮೃತದೇಹ ಪತ್ತೆಯಾಗಿದೆ.
ಹಲಸಿತೂಗಾಂವ್ ಗ್ರಾಮದ ನಿವಾಸಿ ಪ್ರಭಾಕರ್ ಸೂರ್ಯವಂಶಿ (38) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಮೃತ ವ್ಯಕ್ತಿಯು ಮದ್ಯ ಕುಡಿದ ಅಮಲಿನಲ್ಲಿ ಸೇತುವೆ ಮೇಲಿಂದ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದು, ಇಂದು ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.