×
Ad

ಬೀದರ್ | ಗುರುದ್ವಾರಕ್ಕೆ ಬಾಂಬ್‌ ಬೆದರಿಕೆ : ಪ್ರಕರಣ ದಾಖಲು

Update: 2025-09-10 21:00 IST

ಬೀದರ್ : ನಗರದ ಗುರುನಾನಕ್ ಗುರುದ್ವಾರಕ್ಕೆ ರವಿವಾರ (ಸೆ. 7) ಐಇಡಿ ಸ್ಫೋಟದ ಮಾಡುವುದಾಗಿ ಬೆದರಿಕೆಯ ಮೇಲ್ ಬಂದಿದ್ದು, ಸೋಮವಾರ (ಸೆ. 8) ಪ್ರಕರಣ ದಾಖಲಾಗಿದೆ.

ಗುರುದ್ವಾರ ಪ್ರಬಂಧಕ ಕಮಿಟಿಯ ಮ್ಯಾನೇಜರ್ ಜಗಜಿತ್ ಸಿಂಗ್ ಅವರು ದೂರು ನೀಡಿದ್ದಾರೆ.

ಸೆ. 7 ರಂದು ನಮ್ಮ ಇ-ಮೇಲ್ ಐಡಿಗೆ ಐಇಡಿ ಸ್ಫೋಟಕದ ಬೆದರಿಕೆಯ ಕುರಿತು ಸಂದೇಶ ಬಂದಿದ್ದು, ತಕ್ಷಣವೇ ನಾವು ನ್ಯೂ ಟೌನ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News