ಬೀದರ್ | ಕಾಲುವೆಗೆ ಬಿದ್ದು ಬಾಲಕ ಮೃತ್ಯು
Update: 2025-09-10 22:32 IST
ಹರೀಶ್
ಬೀದರ್ : ಕಾರಂಜಾ ಕಾಲುವೆಯಲ್ಲಿ ಬಿದ್ದು ಬಾಲಕನೊರ್ವನು ಮೃತಪಟ್ಟಿರುವ ಘಟನೆ ಭಾಲ್ಕಿ ತಾಲ್ಲೂಕಿನ ಹುಣಜಿ (ಕೆ) ಗ್ರಾಮದಲ್ಲಿ ರವಿವಾರ ನಡೆದಿದೆ.
ಹರೀಶ್ (16) ಮೃತಪಟ್ಟ ಬಾಲಕನಾಗಿದ್ದಾನೆ.
ಹರೀಶ್ ರವಿವಾರ ಬೆಳಿಗ್ಗೆ ಮನೆಯಿಂದ ಹೊಲಕ್ಕೆ ಹೋಗಿದ್ದನು. ಈ ವೇಳೆ ಹೊಲದ ಪಕ್ಕದಲ್ಲಿರುವ ಕಾರಂಜಾ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಹೊಲಕ್ಕೆ ಹೋದ ಹರೀಶ್ ಬರಲಿಲ್ಲ ಎಂದು ರವಿವಾರ ಮನೆಯವರೆಲ್ಲ ಆತನಿಗಾಗಿ ಹುಡುಕಾಡಿದ್ದಾರೆ. ಸೋಮವಾರ ಕಾರಂಜಾ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಧನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.