×
Ad

ಬೀದರ್: ಬಸ್-ಬೈಕ್ ಢಿಕ್ಕಿ; ಸವಾರ ಮೃತ್ಯು

Update: 2025-05-29 14:13 IST

ಬೀದರ್ : ಸರ್ಕಾರಿ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಔರಾದ್ ತಾಲ್ಲೂಕಿನ ಶೆಂಬೆಳ್ಳಿ ಕ್ರಾಸ್ ಹತ್ತಿರ ಗುರುವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ನಡೆದಿದೆ.

ಜೊನ್ನಿಕೇರಿ ಗ್ರಾಮದ ನಿವಾಸಿ ಯುವರಾಜ್ ಬಿರಾದಾರ್ (35) ಮೃತಪಟ್ಟ ಬೈಕ್ ಸವಾರ.

ಗುರುವಾರ ಬೆಳಿಗ್ಗೆ ಯುವರಾಜ್ ಬೀದರ್ ಕಡೆಯಿಂದ ತಮ್ಮ ಸ್ವಂತ ಊರಾದ ಜೊನ್ನಿಕೇರಿಗೆ ಹೋಗುತ್ತಿದ್ದರು. ಈ ಸಮಯದಲ್ಲಿ ಮಾರ್ಗ ಮಧ್ಯದ ಶೆಂಬೆಳ್ಳಿ ಕ್ರಾಸ್ ಹತ್ತಿರ ಕೆ ಎಸ್ ಆರ್ ಟಿ ಸಿ ಬಸ್ ಇವರು ಸಾಗುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಇವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News