×
Ad

ಬೀದರ್ | ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ಬಸ್ ಸೌಲಭ್ಯ; ಜು.19 ರಂದು ಚಾಲನೆ

Update: 2025-07-17 18:55 IST

ಬೀದರ್ : ಜಿಲ್ಲೆಯ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತಿಯ ವತಿಯಿಂದ ಬೀದರ್ ಜಿಲ್ಲೆಗೆ ಬಸ್ aನ್ನು ಒದಗಿಸಲಾಗಿದೆ. ಜು.19 ರಂದು ಬೆಳಿಗ್ಗೆ 11 ಗಂಟೆಗೆ ಬೀದರ್ ಕೋಟೆಯಿಂದ ಬಸ್ ಚಾಲನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸಹಾಯಕ ನಿರ್ದೇಶಕ ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ಮೂಲಕ ತಿಳಿಸಿದ್ದಾರೆ.

ಜಿಲ್ಲೆಯ ಪ್ರವಾಸಿ ತಾಣಗಳ ವಿವರ :

ಬೀದರ್ ಜಿಲ್ಲೆಯು ಬೀದರ್ ಕೋಟೆ, ಮುಹಮ್ಮದ ಗವಾನ್ ಮದರಸಾ, ಚೌಖಂಡಿ ಮತ್ತು ಅಷ್ಟೂರ್ ಟೂಮ್ಸ್, ಬರೀದ್ ಷಾಹಿ ಉದ್ಯಾನವನ, ಝರನಿ ನರಸಿಂಹ ದೇವಸ್ಥಾನ, ಗುರುದ್ವಾರ, ಪಾಪನಾಶ ಮಹಾದೇವ ದೇವಸ್ಥಾನ, ಬಸವಕಲ್ಯಾಣದ ಕೋಟೆ, ಭಾಲ್ಕಿಯ ಕೋಟೆ, ಅನುಭವ ಮಂಟಪ, ವೀರಭದ್ರೇಶ್ವರ ದೇವಸ್ಥಾನ, ಚಳಕಾಪೂರ ಗ್ರಾಮದ ಸಿದ್ದಾರೂಢ ಮಠ ಮತ್ತು ಹನುಮಾನ ದೇವಸ್ಥಾನ ಸೇರಿದಂತೆ ಇತ್ಯಾದಿ ಪ್ರವಾಸಿ ತಾಣಗಳನ್ನು ಒಳಗೊಂಡಿದೆ.

ಕಾರ್ಯಕ್ರಮಕ್ಕೆ ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News