ಬೀದರ್ | ಮಕ್ಕಳು ವಿದ್ಯಾಭ್ಯಾಸ ಪಡೆದು ಉನ್ನತ ಮಟ್ಟಕ್ಕೆ ಹೋಗಬೇಕು : ಮಹೇಶ್ ಸಜ್ಜನಶೇಟ್ಟಿ
ಬೀದರ್ : ಮಕ್ಕಳು ವಿದ್ಯಾಭ್ಯಾಸ ಪಡೆದುಕೊಂಡು ಉನ್ನತ ಮಟ್ಟಕ್ಕೆ ಹೋಗಿ ದೇಶದ ಹೆಸರು ಬೆಳಗಿಸಬೇಕು ಎಂದು ಮಹೇಶ್ ಸಜ್ಜನಶೆಟ್ಟಿ ಹೇಳಿದರು.
ಇಂದು ಭಾಲ್ಕಿ ತಾಲ್ಲೂಕಿನ ಉಚ್ಛಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠವಾದದ್ದು. ಈ ಸಂವಿಧಾನದ ಆಶಯಗಳು ಎಲ್ಲರು ತಿಳಿದುಕೊಂಡು ಸಮ ಸಮಾಜಕ್ಕಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಗಣರಾಜ್ಯೋತ್ಸವದ ನಿಮಿತ್ಯ ಆಯೋಜಿಸಿದ ಆಟಗಳಲ್ಲಿ ಭಾಗವಹಿಸಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯಗುರು ಉಮಾಕಾಂತ್ ಉಡಬಾಳೆ, ಎಸ್ ಡಿ ಎಂ ಸಿ ಅಧ್ಯಕ್ಷ ಭೀಮಣ್ಣಾ ಪಾಟೀಲ್, ಉಪಾಧ್ಯಕ್ಷ ಪ್ರವೀನ್ ಬೆಗಂ, ಸದಸ್ಯ ಸಂದೀಪ್ ಪಾಂಡ್ರೆ, ಯೂನೂನ್ ಖಾನ್, ರಾಜಕುಮಾರ್ ಹಳನೂರೆ, ರವೀಂದ್ರ ಆರಾದೆ, ಸುಘ್ರಾಬಿ ಬೇಗಂ, ಪ್ರೇಮಲಾ ಹೊಸೂರೆ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಸೋಮನಾಥ್ ಸಜ್ಜನ್, ಅರ್ಜುನ್ ಕಾಳೆ, ಗ್ರಾಮ ಪಂಚಾಯತ್ ಸದಸ್ಯ ಶಿವನಾಥ್ ಮಹಾಗಾವೆ, ಪ್ರಭಾಕರ್ ಪಾಟೀಲ್, ಶಿವಲಾಲ್ ರಾಜಪೂತ್ ಹಾಗೂ ಸತೀಶ್ ಕಾಳೆ ಸೇರಿದಂತೆ ಶಾಲೆಯ ಸಿಬ್ಬಂದಿ, ಪಾಲಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.