ಬೀದರ್ | ಹೃದಯಾಘಾತದ ಮೂನ್ಸೂಚನೆ ಕಂಡುಬಂದ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ : ಡಾ.ಚಂದ್ರಕಾಂತ್ ಗುದಗೆ
ಬೀದರ್ : ಹೃದಯಾಘಾತದ ಮೂನ್ಸೂಚನೆ ಕಂಡು ಬಂದ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು ಎಂದು ಖ್ಯಾತ ಹೃದಯ ತಜ್ಞ ಹಾಗೂ ಗುದಗೆ ಆಸ್ಪತ್ರೆಯ ಅಧ್ಯಕ್ಷ ಡಾ.ಚಂದ್ರಕಾಂತ್ ಗುದಗೆ ಅವರು ಪ್ರಕಟಣೆ ಮೂಲಕ ಸಲಹೆ ನೀಡಿದ್ದಾರೆ.
ಹೃದಯಾಘಾತಕ್ಕೂ ಮೂನ್ಸೂಚನೆ ಇದ್ದೇ ಇರುತ್ತದೆ. ಅದು ತಿಳಿದ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆದರೆ ಸಮಸ್ಯೆ ಆಗುವುದಿಲ್ಲ. ಹೃದಯಾಘಾತ ಸೂಚಕ ಲಕ್ಷಣಗಳು ಕಾಣಿಸಿರುತ್ತವೆ. ಆದರೆ ಅದನ್ನು ಗ್ಯಾಸ್ಟಿಕ್ ಇರಬಹುದು ಎಂದು ತಾವೇ ಗುಳಿಗೆ (ಟ್ಯಾಬ್ಲೆಟ್) ತೆಗದುಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದು ಅವರು ತಿಳಿಸಿದ್ದಾರೆ.
ಹೃದಯದ ಸಮಸ್ಯೆಯಾದರೆ ತಲೆಸುತ್ತು, ವಿಪರೀತ ಆಯಾಸ, ಎದೆ ನೋವು, ಎಡ ಭಾಗದ ಕೈ ನೋವು, ಕುತ್ತಿಗೆ ನೋವು, ಭುಜದ ನೋವು, ಬೆನ್ನಿನ ಮೇಲ್ಭಾಗದ ನೋವು, ಹೃದಯ ಬಡಿತ ಹೆಚ್ಚಾಗುವುದು, ಹೃದಯ ಸ್ಥಂಬನವಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರತಿಯೊಬ್ಬರು ತಮ್ಮ ಜೀವನ ಶೈಲಿ ಬದಲಿಸಿಕೊಳ್ಳಬೇಕು. ಮದ್ಯಪಾನ, ಧೂಮಪಾನ, ಗುಟ್ಕಾ ಸೇವನೆ ಹಾಗೂ ಕರೆದ ಪದಾರ್ಥಗಳ ಸೇವನೆಯಿಂದ ದೂರವಿರಬೇಕು. ಹೆಚ್ಚಾಗಿ ಹಸಿ ತರಕಾರಿ ಸೇವಿಸಬೇಕು. ನಿಯಮಿತವಾಗಿ ವ್ಯಾಯಾಮ, ಕಾಲು ನಡೆಗೆ ಮಾಡಿದರೆ ಮಾತ್ರ ಉತ್ತಮ ಆರೋಗ್ಯ ಇಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ.