ಬೀದರ್ | ಬಸವೇಶ್ವರ್ ಎಂಟರ್‌ಪ್ರೈಸಸ್ ಕಪ್ಪು ಪಟ್ಟಿಗೆ ಸೇರಿಸಲು ದಲಿತ ಸಂಘಟನೆಗಳ ಒತ್ತಾಯ
ಬೀದರ್, ಸೆ.15: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯಗಳಿಗೆ ಆಹಾರ ಧಾನ್ಯ ಸರಬರಾಜು ಮತ್ತು ಇತರ ಸಾಮಗ್ರಿಗಳು ಸರಬರಾಜು ಮಾಡುತ್ತಿರುವ ಬಸವೇಶ್ವರ್ ಎಂಟರಪ್ರೈಸಸ್ ಅನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ದಲಿತ ಸಂಘಟನೆಗಳು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಪತ್ರದಲ್ಲಿ ಸಲ್ಲಿಸಿದೆ.
‘ಬಸವೇಶ್ವರ್ ಎಂಟರ್‌ಪ್ರೈಸಸ್‌ನವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಆಹಾರ ಸಾಮಗ್ರಿಗಳ ಸರಬರಾಜಿಗೆ 2021-22ನೇ ಸಾಲಿನಲ್ಲಿ ಬೀದರ್ ತಾಲೂಕಿನ ವಿದ್ಯಾರ್ಥಿನಿಲಯಗಳಿಗೆ ಆಹಾರ ಧಾನ್ಯ ಸರಬರಾಜು ಏಜೆನ್ಸಿಯಾಗಿ ಆಯ್ಕೆಯಾದ ನಂತರ ಸುಮಾರು 13,81,383 ರೂ. ಹೆಚ್ಚುವರಿಯಾಗಿ ಪಡೆದುಕೊಂಡು ಅವ್ಯವಹಾರ ಮಾಡಿದ್ದಾರೆ’ ಎಂದು ಮನವಿ ಪತ್ರದಲ್ಲಿ ಎಂದು ದೂರಲಾಗಿದೆ.
ಈ ಸಂದರ್ಭದಲ್ಲಿ ಭಾರತೀಯ ಭೀಮಸೇನಾ ರಾಷ್ಟ್ರೀಯ ಉಪಾಧ್ಯಕ್ಷ ಅಶೋಕ್‌ಕುಮಾರ್ ಮಾಳಗೆ, ಜಿಲ್ಲಾ ಸಂಚಾಲಕ ಶಿವಕುಮಾರ್ ನೀಲಿಕಟ್ಟಿ, ಶ್ರೀಪತರಾವ್ ದೀನೆ, ಅವಿನಾಶ ದೀನೆ, ಅಂಬಾದಾಸ್ ಗಾಯಕವಾಡ್, ಮಾರುತಿ ಕಂಟಿ, ಶಾಲಿವಾನ್ ಬಡಿಗೇರ್, ಬಾಬುರಾವ್ ಮಿಠಾರೆ, ಸಂದೀಪ್ ಕಾಂಟೆ, ಪ್ರದೀಪ್ ನಾಟೇಕರ್, ನರಸಿಂಗ್, ಕಲ್ಯಾಣರಾವ್ ಗುನಳ್ಳಿಕರ್, ಭಗತ್ ಸಿಂಧೆ, ಸುನೀಲ್ ಸಂಗಮ್, ಶಿವು ಜೀರ್ಗೆ ಹಾಗೂ ಪ್ರದೀಪ್ ಸಾಗರ್ ಉಪಸ್ಥಿತರಿದ್ದರು.