×
Ad

ಬೀದರ್ | ಹಿಂದೂರಾಷ್ಟ್ರದ ಸಂವಿಧಾನ ಸಿದ್ಧವೆಂದು ಹೇಳಿದ ಸ್ವಾಮೀಜಿಯನ್ನು ಗಡಿಪಾರು ಮಾಡಲು ಆಗ್ರಹ

Update: 2025-02-03 22:24 IST

ಬೀದರ್ : ಹಿಂದೂರಾಷ್ಟ್ರದ ಸಂವಿಧಾನಕ್ಕಾಗಿ 501 ಪುಟಗಳ ಕರಡು ಪತ್ರಿ ಸಿದ್ದಪಡಿಸಲಾಗಿದೆ ಎಂದು ಸಂವಿದಾನ ವಿರೋಧಿ ಹೇಳಿಕೆ ನೀಡಿರುವ ಸಾಂಭವಿ ಪೀಠಾಧೀಶ್ವರ ಸ್ವಾಮಿ ಆನಂದ್ ಸ್ವರೂಪ್ ಮಹಾರಾಜ್ ಅವರ ಮೇಲೆ ದೇಶದ್ರೋಹಿ ಪ್ರಕರಣ ದಾಖಲಿಸಿ ಕೂಡಲೇ ಗಡಿಪಾರು ಮಾಡಬೇಕು ಎಂದು ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ಹೋರಾಟ ಸಮಿತಿಯ ಒಕ್ಕೂಟವು ಆಗ್ರಹ ಮಾಡಿದೆ.

ಇಂದು ಚಿಟಗುಪ್ಪಾ ತಹಶೀಲ್ದಾರ್ ಮೂಲಕ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಶಾಂಭವಿ ಪೀಠಾಧೀಶ ಸ್ವಾಮಿ ಆನಂದ್ ಸ್ವರೂಪ್ ಮಹರಾಜ್ ಅವರ ಅಖಂಡ ಹಿಂದೂರಾಷ್ಟ್ರದ ಸಂವಿಧಾನ ಸಿದ್ಧವೆಂದು ವಿವಾದಾತ್ಮಕ ಹೇಳಿಕೆ ನಿಡಿರುವುದನ್ನು ಖಂಡಿಸಲಾಗಿದೆ.

ಅಂಖಡ ಹಿಂದೂರಾಷ್ಟ್ರ ಸಂವಿಧಾನವನ್ನು ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲಿಯೇ ಅದನ್ನು ಜನತೆಯ ಮುಂದಿಡಲು ಸಿದ್ದತೆ ನಡೆದಿದೆ. ದಕ್ಷಿಣ ಭಾರತದ 11 ಮತ್ತು ಉತ್ತರ ಭಾರತದ 14 ವಿದ್ವಾಂಸರನ್ನು ಒಳಗೊಂಡ ಸಂವಿಧಾನ ರಚನಾ ಸಮಿತಿಯು ಧರ್ಮಶಾಸ್ತ್ರಗಳು, ರಾಮರಾಜ್ಯ, ಶ್ರೀಕೃಷ್ಣ ರಾಜ್ಯ, ಮನುಸ್ಮ್ರತಿ, ಮತ್ತು ಚಾಣಕ್ಯನ ಅರ್ಥಶಾಸ್ತ್ರವನ್ನು ಅಭ್ಯಾಸಿಸಿ 501 ಪುಟಗಳ ಸಂವಿಧಾನವನ್ನು ಸಿದ್ದಪಡಿಸಿದೆ. ಇದನ್ನು ಫೆ.3ರ ವಸಂತ ಪಂಚಮಿಯ ದಿನ ಮಹಾಕುಂಭ ಮೇಳದಲ್ಲಿ ಅನಾವರಣಗೊಳಿಸಲಾಗುವುದು ಎಂದು ಅವರು ಬಹಿರಂಗವಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ದೀಲಿಪಕುಮಾರ್ ವರ್ಮಾ, ಗೌರವಾಧ್ಯಕ್ಷ ಗೌತಮ ಬಗದಲ್ಕರ್, ಜನರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ರಾಜಕುಮಾರ್ ಸಿಂಧೆ, ಸಂದೀಪ ಕಟ್ಟಿಮನಿ, ಬಿಲಾಲ ಬೇಮಳಖೇಡಾ, ಓಂಕಾರ ಮೊರೆ, ಮಿಥುನ್ ವರ್ಮಾ, ಶಿವಕುಮಾರ್ ಮಂಗಲಗಿ ಹಾಗೂ ಯೂಸೂಫ್ ಅಲಿ ಜಮಾದಾ ಸೇರಿದಂತೆ ಇತರರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News