×
Ad

ಬೀದರ್ | ಸಿಂಧನಕೇರಾ ಪಿಡಿಓರನ್ನು ವರ್ಗಾವಣೆಗೊಳಿಸಲು ಒತ್ತಾಯ

Update: 2025-07-07 19:29 IST

ಬೀದರ್ : ಹುಮನಾಬಾದ್ ತಾಲ್ಲೂಕಿನ ಸಿಂಧನಕೇರಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಗಂಧಾ ಅವರನ್ನು ವರ್ಗಾವಣೆ ಮಾಡಬೇಕು ಎಂದು ಭೀಮ್ ಆರ್ಮಿ ಸಂಘಟನೆಯು ಒತ್ತಾಯಿಸಿದೆ.

ಹುಮನಾಬಾದನ್‌ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಸುಗಂಧಾ ಅವರು ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಲಾಗಿದೆ.

ಸುಗಂಧಾ ಅವರು ಸುಮಾರು 3 ರಿಂದ 4 ವರ್ಷದಿಂದ ಈ ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ಇವರು ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಇಒ ಅವರಿಗೆ ಕಿರಕುಳ ನೀಡಿದ್ದರಿಂದ ಡಿ ಇ ಒ ಸುಭಾಷ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಾಗಾಗಿ ಇವರನ್ನು ಅಮಾನತು ಮಾಡಲಾಗಿತ್ತು. ಅದಾದ ನಂತರವೂ ಕೂಡ ಸುಗಂಧಾ ಅವರನ್ನು ಮತ್ತೆ ಇದೆ ಪಂಚಾಯತಿಯಲ್ಲಿ ಕೆಲಸಕ್ಕೆ ಸೇರಿಸಿರುವುದು ದುರಂತವಾಗಿದೆ ಎಂದು ಸಂಘಟನೆಯ ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಗಂಧಾ ಅವರು ಸಂಪೂರ್ಣವಾಗಿ ಭ್ರಷ್ಟ ಅಧಿಕಾರಿಯಾಗಿದ್ದು, ಇವರನ್ನು ತಕ್ಷಣವೇ ಸಿಂಧನಕೇರಾ ಗ್ರಾಮದಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಭೀಮ್ ಆರ್ಮಿ ಸಂಘಟನೆಯ ಅನಿಲ್ ದೊಡ್ಡಿ, ತಾಲ್ಲೂಕು ಅಧ್ಯಕ್ಷ ಮನೋಜ್ ಜಾನ್ವೀರ್, ಉಪಾಧ್ಯಕ್ಷ ಶೇಖ್ ಫಿರ್ದೋಸ್, ಮೈನಾರಿಟಿ ತಾಲ್ಲೂಕು ಅಧ್ಯಕ್ಷ ಎಂ. ಡಿ ಬಾಬಾ ಪಟೇಲ್ ಹಾಗೂ ಮಲ್ಲೇಶ್ ಮಿತ್ರ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News