ಬೀದರ್ | 3 ಲಕ್ಷಕ್ಕೂ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ : ಆರೋಪಿಯ ಬಂಧನ
ಬೀದರ್ : ತೆಲಂಗಾಣದ ಸಂಗಾರಡ್ಡಿ ಜಿಲ್ಲೆಯ ರಾಮಚಂದ್ರಪುರಂನ ಮೆಡಿಕಲ್‌ವೊಂದರ ಮೇಲೆ ಸೆ. 3 ರಂದು ದಾಳಿ ನಡೆಸಿದ ಬೀದರ್ ಜಿಲ್ಲಾ ಪೊಲೀಸರು, 3,61,800 ರೂ. ಮೌಲ್ಯದ ಮಾದಕ ವಸ್ತುಗಳು ಜಪ್ತಿ ಮಾಡಿ, ಆರೋಪಿಯನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ್ ಗುಂಟಿ ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿದ್ದು, ಆ. 21ರಂದು ನಗರದ ದಿನದಯಾಳ ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆರೋಪಿಯ ವಿಚಾರಣೆ ನಡೆಸಿದಾಗ ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ರಾಮಚಂದ್ರಪುರಂ ಬಳಿ ಔಷಧಿ ಅಂಗಡಿಯೊಂದರಲ್ಲಿ ಮಾದಕ ವಸ್ತುಗಳು ಅನಧಿಕೃತವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಮಾಹಿತಿಯಂತೆ ಸೆ. 3 ರಾಮಚಂದ್ರಪುರಂ ಮೆಡಿಕಲ್ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಮೆಡಿಕಲ್ ಮಾಲಕ ಮೇಡಿಶೆಟ್ಟಿ ಪ್ರಸಾದ್ ಎನ್ನುವಾತ ಮಾದಕ ವಸ್ತುಗಳು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಮೆಡಿಕಲ್ ನಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ 3,61,800 ರೂ. ಮೌಲ್ಯದ ಟ್ಯಾಬ್ಲೆಟ್, ಸಿರಪ್ ಬಾಟಲ್ ಗಳನ್ನು ವಶಕ್ಕೆ ಪಡೆದು ಮಾಲಕನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಪಿಐ ಪಾಲಾಕ್ಷಯ್ಯ, ಪಿಎಸ್‌ಐ ಸಿದ್ದಣ್ಣಾ ಗಿರಿಗೌಡರ, ಎಎಸ್‌ಐ ನಾರಾಯಣ, ಸಿಬ್ಬಂದಿಗಳಾದ ಸಿದ್ರಾಮ್, ಈರಾರೆಡ್ಡಿ, ಆರೀಫ್, ಕಮಲಾಕರ್, ಶಿವರಾಜ್ ಹಾಗೂ ಮುತ್ತಣ್ಣ ಭಾಗವಹಿಸಿದ್ದರು.