ಬೀದರ್ | ಫೆ.15ರವರೆಗೆ ‘ಕಲಿಕೆಯೇ ಕಲ್ಯಾಣ’ ಅಭಿಯಾನ : ಆಶಿಫ್
Update: 2026-01-09 22:25 IST
ಬೀದರ್ : ‘ಕಲಿಕೆಯೇ ಕಲ್ಯಾಣ’ ಅಭಿಯಾನ ಡಿ.15ರಿಂದ ಆರಂಭವಾಗಿದ್ದು, ಫೆ. 15ರವರೆಗೆ ಜರುಗಲಿದೆ ಎಂದು ಎಸ್‌ಐಒ ರಾಜ್ಯ ಕಾರ್ಯದರ್ಶಿ ಆಶಿಫ್ ಅವರು ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೆಶನ್‌ಆಫ್ ಇಂಡಿಯಾ ಸಂಘಟನೆಯು ಸೆಂಟರ್ ಫಾರ್ ಎಜುಕೇಷನಲ್ ರೀಸರ್ಚ್ ಅಂಡ್ ಅನಾಲಿಸಿಸ್ ಸಹಯೋಗದೊಂದಿಗೆ ಅಭಿಯಾನ ಜರುಗಲಿದೆ. ಶೇ.65 ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಭಾಷೆಯ ಸಮಸ್ಯೆ ಪ್ರಮುಖವಾಗಿ ಕಾಡುತ್ತಿದೆ. ಶಿಕ್ಷಣಕ್ಕೆ ಬಡ ಜನರಿಗೆ ಸರಕಾರಿ ಶಾಲೆಗಳೇ ಆಧಾರವಾಗಿದ್ದು ಅಲ್ಲಿನ ಪ್ರಮುಖ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಎಸ್‌ಐಒ ಸಂಘಟನೆಯ ಬೀದರ್ ಯೂನಿಟ್ ಅಧ್ಯಕ್ಷ ಸಯ್ಯದ್ ಇಝಾನ್ ಅಹ್ಮದ್ ಹಾಗೂ ಆರಿಫೋದ್ದೀನ್ ಉಪಸ್ಥಿತರಿದ್ದರು.