ಬೀದರ್ | ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂ ನಲ್ಲಿ ಎಸ್.ಟಿ ಟೋಕರೆ ಕೋಳಿ ಎಂದು ನಮೂದಿಸಿ : ಜಗನ್ನಾಥ್ ಜಮಾದಾರ್
ಬೀದರ್ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ “ಹಿಂದೂ” ಮತ್ತು ಜಾತಿ ಕಾಲಂನಲ್ಲಿ “ಎಸ್.ಟಿ ಟೋಕರೆ ಕೋಳಿ” ಎಂದು ಬರೆಸಲು ಸಮಾಜದ ಎಲ್ಲಾ ಸದಸ್ಯರು ಜಾಗೃತರಾಗಿರಬೇಕು ಎಂದು ಟೋಕರೆ ಕೋಳಿ ಸಮಾಜದ ಜಿಲ್ಲಾಧ್ಯಕ್ಷ ಜಗನ್ನಾಥ್ ಜಮಾದಾರ್ ಹೇಳಿದರು,.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿಯೇ 2 ಲಕ್ಷಕ್ಕೂ ಹೆಚ್ಚು ಟೋಕರೆ ಕೋಳಿ ಸಮಾಜದ ಜನರಿದ್ದು, ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಆದರೆ ಹಿಂದಿನ ವರದಿಗಳಲ್ಲಿ ಸಮುದಾಯದ ಜನಸಂಖ್ಯೆ ಕಡಿಮೆ ತೋರಿಸಲಾಗಿದೆ ಎಂದು ಅವರು ಆರೋಪಿಸಿದರು.
ಸಂವಿಧಾನದಲ್ಲಿ ನಮ್ಮ ಜಾತಿಗೆ C22.2 ಎಂಬ ಕೋಡ್ ನೀಡಲಾಗಿದೆ. ಜಿಲ್ಲೆಯ ಎಲ್ಲಾ ಸದಸ್ಯರು ಫಾರ್ಮ್‌ನಲ್ಲಿರುವ 60 ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಬೇಕು ಎಂದು ಉಪಾಧ್ಯಕ್ಷ ಸುನಿಲ್ ಖಾಶಂಪುರ್ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಟೋಕರೆ ಕೋಳಿ ಸಮಾಜ ನೌಕರರ ಸಂಘದ ಅಧ್ಯಕ್ಷ ರಾಜಕುಮಾರ್ ಕರಣೆ, ಪ್ರಧಾನ ಕಾರ್ಯದರ್ಶಿ ಮಾರುತಿ ಬಾಪನುರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಮಾಸ್ಟರ್, ಸಹ ಕಾರ್ಯದರ್ಶಿ ರವಿಂದ್ರ ಬಾಲೆಬಾಯಿ, ಯುವ ಮುಖಂಡ ಸುನಿಲ್ ಭಾವಿಕಟ್ಟಿ, ಮುಖಂಡರಾದ ಶರಣಪ್ಪ ಕಾಶೆಂಪುರ್, ಷಣ್ಮುಖಪ್ಪ ವಾಲೇಕರ್, ರಾಜಕುಮಾರ್ ಜಮಾದಾರ್, ಚಂದ್ರಕಾಂತ್ ಹಳ್ಳಿಖೇಡಕರ್ ಮತ್ತು ತುಕಾರಾಮ್ ಹಾಜರಿದ್ದರು.