ಬೀದರ್ | ವಿದ್ಯುತ್ ಕಂಬಕ್ಕೆ ಈಚರ್ ಲಾರಿ ಢಿಕ್ಕಿ : ತಪ್ಪಿದ ಅನಾಹುತ
Update: 2025-02-02 17:45 IST
ಬೀದರ್ : ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಈಚರ್ ಲಾರಿ ಢಿಕ್ಕಿಯಾದ ಪರಿಣಾಮ ವಿದ್ಯುತ್ ಕಂಬ ವಾಹನದ ಮೇಲೆ ಮುರಿದು ಬಿದ್ದಿದ್ದು, ಭಾರಿ ಅನಾಹುತ ತಪ್ಪಿದೆ.
ಶನಿವಾರ ರಾತ್ರಿ ಬಸವಕಲ್ಯಾಣ ನಗರದ ಶಾಹಾಪೂರ ಬಡಾವಣೆಯಲ್ಲಿ ಈಚರ್ ವಾಹನವೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಗುದ್ದಿದ್ದು, ಪರಿಣಾಮವಾಗಿ ವಿದ್ಯುತ್ ತಂತಿ ಸಹಿತವಾಗಿ ಕಂಬ ವಾಹನದ ಮೇಲೆ ಬಿದ್ದಿದೆ. ಇದರಿಂದಾಗಿ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಜೆಸ್ಕಾಂ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ನಡೆಸಿದ್ದಾರೆ.