×
Ad

ಬೀದರ್ | ರೈತರು ಕೃಷಿಯ ಜೊತೆ ವೈಜ್ಞಾನಿಕ ಉಪಕಸುಬು ಕೈಗೆತ್ತಿಕೊಂಡರೆ ಆರ್ಥಿಕವಾಗಿ ಸಬಲರಾಗುತ್ತಾರೆ : ಪ್ರೊ.ಕೆ.ಸಿ.ವೀರಣ್ಣ

Update: 2025-07-15 21:24 IST

ಬೀದರ್ : ಜಿಲ್ಲೆಯ ರೈತರು ಕೃಷಿಯ ಜೊತೆಯಲ್ಲಿ ವೈಜ್ಞಾನಿಕ ಪಶುಪಾಲನೆಯಂತಹ ಉಪಕಸುಬುಗಳನ್ನು ಕೈಗೆತ್ತಿಕೊಂಡರೆ ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಅವರು ತಿಳಿಸಿದರು.

ಇಂದು ನಗರದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ದೇವಣಿ) ಕಟ್ಟಿತುಗಾಂವ್ ಹಾಗೂ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತ, ಪಶುಪಾಲಕರಿಗಾಗಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು ಪ್ರಾಯೋಜಿಸಿರುವ ವೈಜ್ಞಾನಿಕ ಪಶುಪಾಲನೆಯಿಂದ ಆರ್ಥಿಕ ಅಭಿವೃದ್ದಿ ಮತ್ತು ಸುಸ್ಥಿರತೆ ಕುರಿತು ಜು.15 ರಿಂದ 18 ರವರೆಗೆ ನಡೆಯುವ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯವು ಪಶುಪಾಲನೆಗೆ ತುಂಬಾ ಪೂರಕವಾದ್ದರಿಂದ ರೈತರು ಇವುಗಳಲ್ಲಿ ತೊಡಗಿ ಹೆಚ್ಚಿನ ಆದಾಯ ಪಡೆಯಬೇಕು. ಅಷ್ಟೇ ಅಲ್ಲದೇ, ಲಭ್ಯವಿರುವ ವಿವಿಧ ತಜ್ಞರ ಸಲಹೆ ಪಡೆದು ವೈಜ್ಞಾನಿಕವಾಗಿ ಪಶುಪಾಲನೆ ಕೈಗೊಂಡು ಮೌಲ್ಯವರ್ಧನೆಯಿಂದ ಹೆಚ್ಚಿನ ಲಾಭ ಪಡೆಯಿರಿ ಎಂದು ರೈತರಿಗೆ ಸಲಹೆ ನೀಡಿದರು.

ಪಶುಸಂಗೋಪನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ನರಸಪ್ಪ ಅವರು ಮಾತನಾಡಿ, ರೈತರು ಆತ್ಮವಿಶ್ವಾಸ ಹಾಗೂ ಸಹನೆಯಿಂದ ಪಶುಪಾಲನೆಯಲ್ಲಿ ತೊಡಗಿಸಿಕೊಂಡರೆ ಆರ್ಥಿಕ ಅಭಿವೃದ್ಧಿ ಮತ್ತು ಸುಸ್ಥಿರತೆ ಖಂಡಿತ ಸಾಧ್ಯವಿದೆ. ಆದ್ದರಿಂದ ರೈತರು ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಪ್ರೋಜೆಕ್ಟ್ ಇಂಜಿನಿಯರ್ ಗಂಗಾಧರಪ್ಪ ಆರ್., ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ.ವಿ.ಶಿವಪ್ರಕಾಶ್, ವಿಸ್ತರಣಾ ನಿರ್ದೇಶಕ ಡಾ. ಬಸವರಾಜ್ ಅವಟಿ, ಮಹಾವಿದ್ಯಾಲಯದ ಪ್ರಭಾರಿ ಡೀನ್‌ ಡಾ.ಆರ್.ಜಿ.ಬಿಜುರಕರ್, ಡಾ.ಪ್ರಕಾಶಕುಮಾರ್ ರಾಠೋಡ್, ಡಾ.ವಿದ್ಯಾಸಾಗರ್ ಹಾಗೂ ಡಾ.ಕೊಟ್ರೇಶ್ ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News