ಬೀದರ್ | ವಿಸ್ಡ್ಂ ಕಾಲೇಜಿನಲ್ಲಿ ಉಚಿತ ನೀಟ್ ತರಬೇತಿ : ಮುಹಮ್ಮದ್ ಆಸಿಫೊದ್ದೀನ್
ಬೀದರ್ : ನಗರದ ವಿಸ್ಡ್ಂ ಪದವಿಪೂರ್ವ ಕಾಲೇಜು ಹಾಗೂ ನೀಟ್ ಅಕಾಡೆಮಿಯಲ್ಲಿ ನೀಟ್ ಪುನರಾವರ್ತಿತ ಅಭ್ಯರ್ಥಿಗಳಿಗೆ ಒಂದು ವಾರದ ಉಚಿತ ಡೆಮೊ ತರಬೇತಿ ನೀಡಲು ನಿರ್ಧರಿಸಿದ್ದು, ವಿದ್ಯಾರ್ಥಿಗಳು ಹೆಸರು ನೋಂದಾಯಿಸಬಹುದಾಗಿದೆ. ಒಂದು ವಾರದ ತರಬೇತಿ ನಂತರ 720 ಅಂಕಗಳ ಉಚಿತ ಪರೀಕ್ಷೆ ಕೂಡ ನಡೆಸಲಾಗುವುದು ಎಂದು ಕಾಲೇಜಿನ ಅಧ್ಯಕ್ಷ ಮುಹಮ್ಮದ್ ಆಸಿಫೊದ್ದೀನ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ವಿಸ್ಡ್ಂ ಕಾಲೇಜು ನೀಟ್ ಪುನರಾವರ್ತಿತ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ರೂಪದಲ್ಲಿ ಈ ಬಾರಿ 1 ಕೋಟಿ ರೂ. ಗೂ ಅಧಿಕ ವಿದ್ಯಾರ್ಥಿ ವೇತನ ನೀಡಲಿದೆ ಎಂದು ಅವರು ಹೇಳಿದ್ದಾರೆ.
ನೀಟ್‍ನಲ್ಲಿ 400ಕ್ಕೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶುಲ್ಕದ ಶೇ.90, 380ಕ್ಕೂ ಅಧಿಕ ಅಂಕ ಪಡೆದವರಿಗೆ ಶೇ.80, 360ಕ್ಕೂ ಹೆಚ್ಚು ಅಂಕ ಗಳಿಸಿದವರಿಗೆ ಶೇ.70, 340ಕ್ಕೂ ಅಧಿಕ ಅಂಕ ಪಡೆದವರಿಗೆ ಶೇ.60, 320ಕ್ಕೂ ಹೆಚ್ಚು ಅಂಕ ಗಳಿಸಿದವರಿಗೆ ಶೇ.50, 300ಕ್ಕೂ ಅಧಿಕ ಅಂಕ ಗಳಿಸಿದವರಿಗೆ ಶೇ.40, 250ಕ್ಕೂ ಹೆಚ್ಚು ಅಂಕ ಪಡೆದವರಿಗೆ ಶೇ.30, 200ಕ್ಕೂ ಅಧಿಕ ಅಂಕ ಗಳಿಸಿದವರಿಗೆ ಶೇ.20 ಹಾಗೂ 199ಕ್ಕಿಂತ ಕಡಿಮೆ ಅಂಕ ಪಡೆದವರಿಗೆ ಶೇ.15 ರಷ್ಟು ಶುಲ್ಕ ವಿನಾಯಿತಿ ಮೂಲಕ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳು ಒಂದು ವಾರದ ಉಚಿತ ತರಬೇತಿ ಪಡೆಯುವ ಮೂಲಕ ವಿದ್ಯಾರ್ಥಿ ವೇತನದ ಲಾಭ ಕೂಡ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.