×
Ad

Bidar | ಮಳೆಗಾಗಿ ಸಿಂಧನಕೇರಾ ಗ್ರಾಮದಲ್ಲಿ ಕಪ್ಪೆಗಳ ಮದುವೆ !

ಮಾಜಿ ಸಚಿವ ರಾಜಶೇಖರ್ ಪಾಟೀಲ್ ಭಾಗಿ

Update: 2026-07-15 19:09 IST

ಹುಮನಾಬಾದ್‌ : ಮಳೆಯ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಒಳಿತಿಗಾಗಿ ತಾಲೂಕಿನ ಸಿಂಧನಕೇರಾ ಗ್ರಾಮದಲ್ಲಿ ಬುಧವಾರ ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ‘ಕಪ್ಪೆ ಮದುವೆ’ ನೆರವೇರಿಸಿದರು.

ಗ್ರಾಮದ ಮಹಿಳೆಯರು ಒಗ್ಗೂಡಿ ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸುವ ಮೂಲಕ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿದರು. ಗ್ರಾಮೀಣ ಸಂಪ್ರದಾಯದ ಈ ವಿಶಿಷ್ಟ ಆಚರಣೆಯಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಭಾಗವಹಿಸಿ ವರುಣನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು, ರೈತರು, ಹಿರಿಯರು ಹಾಗೂ ಮಹಿಳೆಯರು ಪಾಲ್ಗೊಂಡು ಭಜನೆ, ಹಾಡುಗಳ ಮೂಲಕ ವರುಣ ದೇವರನ್ನು ಆರಾಧಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News