×
Ad

Bidar | ಜು.16 ರಂದು ವಿದ್ಯುತ್ ವ್ಯತ್ಯಯ

Update: 2026-07-15 18:13 IST

ಬೀದರ್ : ಮನ್ನಾಎಖ್ಖೇಳ್ಳಿ ಮತ್ತು ಕಮಠಾಣ ಉಪ-ವಿಭಾಗದ 110 ಕೆ.ವಿ ಮನ್ನಾಎಖ್ಖೇಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜು.16 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂನ ವೃತ್ತ ಅಧೀಕ್ಷಕ ಇಂಜಿನೀಯರ್ ಅವರು‌ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಲೈನ್‌ಗಳಾದ 33 ಕೆ.ವಿ.ಬೆಮಳಖೇಡ, 33 ಕೆವಿ ಬಗದಲ್, 11 ಕೆ.ವಿ. ಕರಕನಹಳ್ಳಿ ಎನ್.ಜೆ.ವೈ, 11 ಕೆ.ವಿ. ಕರಕಪಳ್ಳಿ ಐ.ಪಿ, 11 ಕೆ.ವಿ ಬೆಮಳಖೇಡ ಐ.ಪಿ, 11 ಕೆ.ವಿ.ವಿಠಲಪೂರ್ ಎನ್.ಜೆ.ವೈ, 11 ಕೆ.ವಿ.ಉದಮನಹಳ್ಳಿ ಐ.ಪಿ, 11 ಕೆ.ವಿ.ಔರಾದ್ ಐ.ಪಿ, 11 ಕೆ.ವಿ.ಬಗದಲ್‌‌ ಥಾಂಡಾ ಐ.ಪಿ, 11 ಕೆ.ವಿ.ಸಿರ್ಸಿ ಎನ್.ಜೆ.ವೈ, 11 ಕೆ.ವಿ.ಸಿಂಧೋಲ್ ಎನ್.ಜೆ.ವೈ, 11 ಕೆ.ವಿ.ಖಾಶಂಪೂರ್ ಐ.ಪಿ ಮತ್ತು 11 ಕೆ.ವಿ.ಬಗದಲ್ ಐ.ಪಿ,‌ 11 ಕೆ.ವಿ. ಭೈರನಹಳ್ಳಿ ಎನ್.ಜೆ.ವೈ, 11 ಕೆ.ವಿ.ಮುರಾರ್ಜಿ ಎನ್.ಜೆ.ವೈ ಫೀಡರ್‌ಗಳ ವ್ಯಾಪ್ತಿಗೆ ಬರುವ ಸುತ್ತಲಿನ ಗ್ರಾಮಗಳಾದ ಕರಕನಹಳ್ಳಿ, ಕರಕಪಳ್ಳಿ, ಬೆಮಳಖೇಡ, ವಿಠಲಪೂರ್, ಉದಮನಹಳ್ಳಿ, ಔರಾದ್, ಬಗದಲ್‌‌ ಥಾಂಡಾ, ಸಿರ್ಸಿ, ಸಿಂಧೋಲ್, ಖಾಶಂಪೂರ್, ಬಗದಲ್, ಭೈರನಹಳ್ಳಿ, ಮುರಾರ್ಜಿ ಮತ್ತು ಸುತ್ತಲಿನ ಗ್ರಾಮಗಳಿಗೆ ಜು.16ರಂದು ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ಗ್ರಾಹಕರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News