ಬೀದರ್ | ಹೊಲದಲ್ಲಿ ಬೆಳೆದಿದ್ದ 15 ಲಕ್ಷಕ್ಕಿಂತಲೂ ಹೆಚ್ಚು ಮೌಲ್ಯದ ಗಾಂಜಾ ವಶ : ಆರೋಪಿಯ ಬಂಧನ
ಬೀದರ್ : ಚೆಂಡು ಹೂವಿನ ಬೆಳೆಯ ಜೊತೆಗೆ ಬೆಳೆದಿದ್ದ ಸುಮಾರು 15,10,000 ಸಾವಿರ ರೂ. ಮೌಲ್ಯದ 15 ಕೆ.ಜಿ 100 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದು, ಆರೋಪಿಯನ್ನು ಬಂದಿಸಿದ ಘಟನೆ ಇಂದು ಕಮಲನಗರ ತಾಲೂಕಿನ ಸಾವಳಿ ಗ್ರಾಮದಲ್ಲಿ ನಡೆದಿದೆ.
ಸಾವಳಿ ಗ್ರಾಮದ ನಿವಾಸಿ ಸಂತೋಷ ತಂದೆ ನರಸಿಂಗರಾವ್ ಎನ್ನುವ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಸಾವಳಿ ಗ್ರಾಮದ ತನ್ನ ಹೊಲದಲ್ಲಿ ಸಂತೋಷನು ಗಾಂಜಾ ಗಿಡಗಳನ್ನು ಬೆಳೆಸಿರುವ ಬಗ್ಗೆ ಮಾಹಿತಿ ಪಡೆದುಕೊಂಡು, ಪಿಎಸ್ಐ ಆಶಾ ಅವರ ತಂಡ ಪಂಚರ ಸಮ್ಮುಖದಲ್ಲಿ ಇಂದು ದಾಳಿ ನಡೆಸಿ, ಹೊಲದಲ್ಲಿ ಬೆಳೆದಿರುವ ಒಟ್ಟು 51 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಎಲ್ಲ ಗಿಡಗಳ ಒಟ್ಟು ತೂಕ 15 ಕೆ.ಜಿ 100 ಗ್ರಾಂ ಆಗಿದ್ದು, ಸುಮಾರು 15 ಲಕ್ಷ 10 ಸಾವಿರ ರೂ. ಮೌಲ್ಯದ್ದಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿಸಂತೆ ಕಮಲನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.