ಬೀದರ್ | 14 ಲಕ್ಷ ರೂ. ಮೌಲ್ಯದ ಗಾಂಜಾ ವಶ: ಆರೋಪಿಯ ಬಂಧನ
Update: 2025-03-11 23:48 IST
ಬೀದರ್ : ಭಾಲ್ಕಿ ನಗರ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ 14 ಲಕ್ಷ ರೂ. ಕ್ಕಿಂತ ಅಧಿಕ ಮೌಲ್ಯದ ಗಾಂಜಾ ವಶಕ್ಕೆ ಪಡೆದು ಆರೋಪಿಯನ್ನು ಬಂಧನ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನದಂತೆ ಭಾಲ್ಕಿ ಪಟ್ಟಣದ ರೈಲ್ವೇ ನಿಲ್ದಾಣದ ಕ್ರಾಸ್ ಹತ್ತಿರ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ತಿಳಿದು ಪಿಐ ಬಿ.ಅಮರೇಶ್ ಅವರು ತಮ್ಮ ಅಧಿಕಾರಿ, ಸಿಬ್ಬಂದಿ, ಪತ್ರಾಂಕಿತ ಅಧಿಕಾರಿ ಹಾಗೂ ತಹಶೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೇರೆ ಅವರನ್ನ ಒಳಗೊಂಡ ತಂಡ ಆರೋಪಿ ಮೇಲೆ ದಾಳಿ ಮಾಡಿ 14,69,500 ರೂ. ಮೌಲ್ಯದ 14.695 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.