×
Ad

ಬೀದರ್ | ಬೆಂಕಿ ತಗುಲಿ ಗ್ಯಾರೇಜ್, ಎಲೆಕ್ಟ್ರಿಕಲ್ ಅಂಗಡಿ ಸುಟ್ಟು ಭಸ್ಮ

Update: 2025-01-17 22:52 IST

ಬೀದರ್ : ಭಾಲ್ಕಿ ತಾಲ್ಲೂಕಿನ ಬಾಜೋಳಗಾ (ಕೆ) ಗ್ರಾಮದ ರಸ್ತೆ ಪಕ್ಕದಲ್ಲಿರುವ ಗ್ಯಾರೇಜ್ ಹಾಗೂ ಎಲೆಕ್ಟ್ರಿಕಲ್ ಅಂಗಡಿಗೆ ಬೆಂಕಿ ತಗುಲಿದ್ದು, ಎರಡು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

ಗ್ಯಾರೇಜ್ ಅಂಗಡಿಯು ಮಾವಿನಹಳ್ಳಿ ಗ್ರಾಮದ ನಿವಾಸಿಯಾದ ಶಿವಪುತ್ರ ಬಿರಾದಾರ್ ಎನ್ನುವವರಿಗೆ ಸೇರಿದೆ. ಎಲೆಕ್ಟ್ರಿಕಲ್ ಅಂಗಡಿಯು ಬ್ಯಾಲಹಳ್ಳಿ ಗ್ರಾಮದ ನಿವಾಸಿಯಾದ ಕಿರಣ್‌ ಎಂಬುವವರಿಗೆ ಸೇರಿದೆ.

ರಾತ್ರಿ 9 ಗಂಟೆಗೆ ಎರಡು ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಎರಡು ಅಂಗಡಿಗಳು ಮುಚ್ಚಿದ್ದರಿಂದ ಅಂಗಡಿಯಲ್ಲಿ ಯಾರು ಇರಲಿಲ್ಲ. ಬೆಂಕಿ ತಗುಲಿದಕ್ಕೆ ಯಾವುದೇ ರೀತಿಯ ಕಾರಣ ತಿಳಿದು ಬಂದಿಲ್ಲ ಎಂದು ಗೊತ್ತಾಗಿದೆ.

ಗ್ಯಾರೇಜ್ ಅಂಗಡಿಯಲ್ಲಿ ಸುಮಾರು 8 ರಿಂದ 10 ಲಕ್ಷ ರೂ. ಮೌಲ್ಯದ 5 ದ್ವಿಚಕ್ರ ವಾಹನ ಹಾಗೂ ವಾಹನಗಳ ಬಿಡಿಭಾಗಗಳು ಇದ್ದವು. ಅದೇ ರೀತಿ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಸುಮಾರು 2 ಲಕ್ಷ ರೂ. ಮೌಲ್ಯದ ವಸ್ತುಗಳಿದ್ದವು. ಎರಡು ಅಂಗಡಿಯಲ್ಲಿ ಸಂಪೂರ್ಣವಾಗಿ ಬೆಂಕಿ ಆವರಿಸಿದ್ದು, ಎಲ್ಲ ವಸ್ತುಗಳು ಸುಟ್ಟು ಕರಕಲಾಗುತ್ತಿವೆ ಎಂದು ಅಂಗಡಿ ಮಾಲಕರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದುಬಂದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News