×
Ad

ಬೀದರ್ | ಕನ್ನಡ ಸಾಹಿತ್ಯಕ್ಕೆ ಜಿ.ಬಿ ವಿಸಾಜಿ ಅವರ ಕೊಡುಗೆ ಅಪಾರ : ಮೋಹನ್ ರೆಡ್ಡಿ

Update: 2025-09-22 23:42 IST

ಬೀದರ್ : ಜಿ.ಬಿ ವಿಸಾಜಿ ಅವರು ಈ ಭಾಗದ ಹಿರಿಯ ಸಾಹಿತಿಗಳಾಗಿದ್ದು, ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಮೋಹನ್ ರೆಡ್ಡಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮವಾರ ಭಾಲ್ಕಿಯ ಅಲ್ಲಮ ಪ್ರಭು ಬಿ ಎಡ್ ಶಿಕ್ಷಣ ಮಹಾವಿದ್ಯಾಲಯದಲ್ಲಿ, ಶಬನಮ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಿರಿಯ ಸಾಹಿತಿ ಜಿ.ಬಿ ವಿಸಾಜಿ ಅವರ ಪ್ರಥಮ ಪುಣ್ಯಸ್ಮರಣೆಯ ನಿಮಿತ್ತ ನೆನಪುಗಳೆ ಅಮರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀಮಠದ ಪ್ರತಿಯೊಂದು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತಿಕ ಕಾರ್ಯಕ್ರಮಗಳಲ್ಲಿ ಜಿ.ಬಿ ವಿಸಾಜಿ ಅವರು ಭಾಗಿಯಾಗಿದ್ದರು. ಚನ್ನಬಸವ ಪಟ್ಟದೇವರ ಕುರಿತು 'ಕಾಯಕ ಪರಿಣಾಮಿ' ಎಂಬ ಪುಸ್ತಕ ಬರೆದಿದ್ದಾರೆ. ಅವರ ವಿದ್ಯಾರ್ಥಿಗಳು ಪ್ರಾಧ್ಯಾಪಕ, ಸಾಹಿತಿಗಳಾಗಿದ್ದಾರೆ. ಅವರ ಸಾಹಿತ್ಯದ ಒಡನಾಟದಿಂದ ಅನೇಕ ಜನ ಕನ್ನಡ ಭಾಷೆಯಲ್ಲಿ ಪ್ರಭುತ್ವ ಸಾಧಿಸಿದ್ದಾರೆ. ಅವರ ವ್ಯಕ್ತಿತ್ವವು ಸರಳ ಸಜ್ಜನಿಕೆಯಿಂದ ಕೂಡಿತ್ತು. ಅದಕ್ಕೆ ಇವತ್ತಿನ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಹೇಳಿದರು.

ಡಾ. ಮಕ್ತುಂಬಿ, ಹಿರಿಯ ಸಾಹಿತಿ ಗಣಪತಿ ಭೂರೆ, ಪ್ರಾಚಾರ್ಯ ಪಾಂಡುರಂಗ್ ಕುಂಬಾರ್ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ರಾಜೇಂದ್ರ ವರವಟ್ಟೆ, ಉಪ ಪ್ರಾಚಾರ್ಯ ಮಾಣಿಕರಾವ್ ಪಾಂಚಾಳ್ ಹಾಗೂ ಅರ್ಚನಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News