ಬೀದರ್ | ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡರೆ ಮೊಬೈಲ್ ಗೀಳಿನಿಂದ ದೂರ ಇರಬಹುದು : ಲಕ್ಷ್ಮಣ್ ಮಚಕುರೆ
Update: 2025-07-19 19:49 IST
ಬೀದರ್ : ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡರೆ ಮೊಬೈಲ್ ಗೀಳಿನಿಂದ ದೂರ ಇರಬಹುದು. ಇದರಿಂದಾಗಿ ಜ್ಞಾನವು ಹೆಚ್ಚಾಗುತ್ತದೆ. ಆರೋಗ್ಯ ಕೂಡ ಒಳ್ಳೆ ರೀತಿಯಿಂದ ಕಾಪಾಡಿಕೊಳ್ಳಬಹುದು ಎಂದು ಲಕ್ಷ್ಮಣ್ ಮಚಕುರೆ ಅವರು ತಿಳಿಸಿದರು.
ಚಿಟಗುಪ್ಪ ತಾಲೂಕಿನ ಬೋರಾಳ್ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಬೋರಾಳ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರಿನ ಜನ ಆರೋಗ್ಯ ಕೇಂದ್ರ ನಿಮಾನ್ಸ್ ಅಡಿಯಲ್ಲಿ ಬರುವ ಜಿಲ್ಲಾ ಯುವ ಸ್ಪಂದನ ಕೇಂದ್ರದ ವತಿಯಿಂದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯಗುರು ವಿಜಯಕುಮಾರ್ ಹಾಗೂ ಶಿಕ್ಷಕ ರಾಜಶೇಖರ್ ಸೇರಿದಂತೆ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.