×
Ad

ಬೀದರ್ | ಜ.26 ರಂದು ಜನ ಜಾಗೃತಿ ಸಮಾವೇಶ, ಬಹಿರಂಗ ಸಭೆ : ಮಾರುತಿ ಬೌದ್ಧೆ

Update: 2025-01-24 15:16 IST

ಬೀದರ್ : 75ನೇ ಗಣರಾಜ್ಯೋತ್ಸವ, ಭಾರತೀಯ ಸಂವಿಧಾನ ಜಾರಿಯಾದ ಸಂಭ್ರಮ ದಿನದ ನಿಮಿತ್ತ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಜನ ಜಾಗೃತಿ ಸಮಾವೇಶ ಹಾಗೂ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಮಾರುತಿ ಬೌದ್ಧೆ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಜೆ ಎನ್ ಯು ನ ಪ್ರಾಧ್ಯಾಪಕ ಡಾ.ಲಕ್ಷ್ಮಣ್ ಯಾದವ್ ಹಾಗೂ ಡಾ.ಜಯದೇವಿ ಗಾಯಕವಾಡ್ ಅವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬಾಬುರಾವ್ ಪಾಸ್ವನ್ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕೂಡ ನಾವು ಸಂವಿಧಾನ ಜಾರಿಗೆ ಬಂದ ದಿನ ಆಚರಿಸುತ್ತಿದ್ದೇವೆ. ಈ ವರ್ಷ ಎಲ್ಲ ದಲಿತ ಸಂಘಟನೆಗಳು ಒಗ್ಗೂಡಿ, ಬೃಹತ್ ಮಟ್ಟದಲ್ಲಿ ಸಮಾವೇಶ ಮಾಡುತಿದ್ದೇವೆ. ಹಾಗಾಗಿ ಜಿಲ್ಲೆಯ ಎಲ್ಲ ಸಮುದಾಯದ ಜನ ಸೇರಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಮಿತಿಯ ಅಧ್ಯಕ್ಷ ವಿಷ್ಣುವರ್ಧನ್ ವಾಲ್ದೊಡ್ಡಿ ಮಾತನಾಡಿ, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಂಬೇಡ್ಕರ್ ಹಾಗೂ ಸಂವಿಧಾನದ ವಿಚಾರಗಳು ತಿಳಿದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಲಹಾ ಸಮಿತಿ ಪದಾಧಿಕಾರಿಗಳಾದ ಶ್ರಿಪತಾರಾವ್ ದೀನೆ, ಕಲ್ಯಾಣರಾವ್ ಭೋಸ್ಲೆ, ರಮೇಶ್ ಕಟ್ಟಿತುಗಾಂವ್, ಗೌರವಾಧ್ಯಕ್ಷ ಶಿವಕುಮಾರ್ ನೀಲಕಟ್ಟಿ, ಕಾರ್ಯಾಧ್ಯಕ್ಷ ಪ್ರೇಮಕುಮಾರ್ ಕಾಂಬ್ಳೆ, ಕಾರ್ಯದರ್ಶಿ ಅರುಣ್ ಪಟೇಲ್ ಹಾಗೂ ಅಂಬಾದಾಸ್ ಗಾಯಕವಾಡ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News