ಬೀದರ್ | ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ
ಬೀದರ್ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)ಯ ನೂತನ ರಾಜ್ಯ ಸಂಚಾಲಕ ಪರಶುರಾಮ್ ನೀಲನಾಯಕ ಅವರ ಆದೇಶದಂತೆ ಸಂಘಟನೆಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಎಂದು ಸಂಘಟನೆಯ ಸಂಚಾಲಕ ಸುನಿಲ್ ಸಂಗಮ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ನಗರದ ಪ್ರಿಯದರ್ಶಿನಿ ಉಡುಪಿ ಹೋಟೆಲ್ ನಲ್ಲಿ ಶನಿವಾರ ಸಂಘಟನೆಯ ಸಂಚಾಲಕ ಸುನಿಲ್ ಸಂಗಮ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು. ಈ ವೇಳೆ ಭಂತೆ ಸಂಘರಖ್ಖಿತ್ ಅವರು ಡಾ.ಅಂಬೇಡ್ಕರ್ ಹಾಗೂ ಬುದ್ಧರ ಭಾವಚಿತ್ರಕ್ಕೆ ಪುಷ್ಪ ಹಾಕಿ ಪೂಜೆ ಮಾಡಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾಗಿ ತುಕಾರಾಮ್ ತಾಳಮಡಗಿ ಹಾಗೂ ತುಕಾರಾಮ್ ಮುತ್ತಂಗಿಕರ್, ಖಜಾoಚಿಯಾಗಿ ಸತೀಶಕುಮಾರ್ ದೀನೆ, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷರಾಗಿ ಸುನಿಲಕುಮಾರ್ ಭಾವಿಕಟ್ಟಿ, ಜಿಲ್ಲಾ ಸಮಿತಿಯ ಸದಸ್ಯರಾಗಿ ಪ್ರೇಮನಾಥ್ ಸೇರಿಕಾರ್, ಸುದರ್ಶನ್ ಧನ್ವಂತ್, ಬಕ್ಕಪ್ಪ ತಾರೆ, ಅಶೋಕ್ ಚವಳಿಕರ್, ಶಿವಾನಂದ್ ಕುದುರೆ ಮೈಲೂರ್ ಅವರನ್ನು ಸಮಿತಿಯ ಎಲ್ಲರ ಸಮ್ಮುಖದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ದಲಿತ ಮುಖಂಡ ರಾಜು ಕಪನೂರ್, ಮಹೇಶ್ ಗೋರನಾಳಕರ್, ಭರತ್ ಕಾಂಬಳೆ ಹಾಗೂ ಶಿವರಾಜ್ ವಿದ್ಯಾಸಾಗರ್ ಸೇರಿದಂತೆ ಇತರರು ಇದ್ದರು.