ಬೀದರ್ | ಜಿರಗ್ಯಾಳ್ ಗ್ರಾಮದಲ್ಲಿ ಹಾಡಹಗಲೇ ವ್ಯಕ್ತಿಯ ಕೊಲೆ
Update: 2026-08-13 19:51 IST
ಸಾಂದರ್ಭಿಕ ಚಿತ್ರ
ಬೀದರ್ : ಭಾಲ್ಕಿ ತಾಲೂಕಿನ ಜಿರಗ್ಯಾಳ್ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಜಿರಗ್ಯಾಳ್ ಗ್ರಾಮದ ರಾಜಕುಮಾರ್ ಸಿಂಧೆ (46) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಅದೇ ಗ್ರಾಮದ ಪ್ರದೀಪ್ ಲಾದೆ ಎನ್ನುವ ವ್ಯಕ್ತಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಮೂರು ನಾಲ್ಕು ದಿನದಿಂದ ರಾಜಕುಮಾರ್ ಹಾಗೂ ಪ್ರದೀಪ್ ಇಬ್ಬರು ಮದ್ಯ ಕುಡಿದು ಜಗಳ ಮಾಡಿಕೊಳ್ಳುತ್ತಿದ್ದರು. ಇವತ್ತು ಆರೋಪಿ ಪ್ರದೀಪ್, ರಾಜಕುಮಾರ್ ಗೆ ಮದ್ಯ ಕುಡಿದು "ನನ್ನ ಹೆಂಡತಿಗೆ ಬಯ್ಯುತ್ತಿಯಾ" ಎಂದು ಪ್ರಶ್ನಿಸಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮೆಹಕರ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.