×
Ad

ಬೀದರ್ | ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯ ಸಲಹಾ ಸಮಿತಿ ಸದಸ್ಯರಾಗಿ ಮಾರುತಿ ಬೌದ್ದೆ ನೇಮಕ

Update: 2025-10-10 19:03 IST

ಬೀದರ್ : ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುವ 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ಸಲಹಾ ಸಮಿತಿಯ ಸದಸ್ಯರಾಗಿ ಸಮಾಜ ಸೇವಕ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ ಅವರು ನೇಮಕವಾಗಿದ್ದಾರೆ.

ಮಾರುತಿ ಬೌದ್ದೆ ಅವರು ದಲಿತ ಸಂಘರ್ಷ ಸಮಿತಿಯಲ್ಲಿ ಸಾಮಾಜಿಕ ಸೇವೆ ಸಲ್ಲಿಸಿದ್ದಾರೆ. ಈ ಸೇವೆಯನ್ನು ಗುರುತಿಸಿ ಈ ಆಯ್ಕೆ ಸಮಿತಿಗೆ ಅವರನ್ನು ನೇಮಕ ಮಾಡಲಾಗಿದೆ.

ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ಸಲಹಾ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದಕ್ಕೆ ಡಾ.ಕಾಶಿನಾಥ್ ಚೆಲ್ವಾ, ದಶರಥ ಗುರು, ವಿಠಲದಾಸ್ ಪ್ಯಾಗೆ, ಮಹೇಶ್ ಗೋರನಾಳಕರ್, ವಿನಯಕುಮಾರ್ ಮಾಳಗೆ, ವಿನೋದ್ ಬಂದಗೆ, ಮಹಾಲಿಂಗ್ ಬೆಲ್ದಾಳ್, ಶಂಭುರಾವ್ ಸಾಗರ್, ಎಂ.ಎಸ್ ಮನೋಹರ್, ಕಂಟೇಪ್ಪಾ ಪೂಜಾರಿ, ರಾಜಕುಮಾರ್ ವಾಘಮಾರೆ, ಉದಯ ನಾಯಕ್, ರಾಹುಲ್ ಹಾಲೇಪುರ್ಗಿಕರ್, ಅರುಣ್ ಪಟೇಲ್ ಹಾಗೂ ಶ್ರೀಮಂತ್ ಜೋಷಿ ಸೇರಿದಂತೆ ಇತರರು ಹರ್ಷ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News