×
Ad

ಬೀದರ್ | ವ್ಯಕ್ತಿ ಕಾಣೆ : ಪತ್ತೆಗಾಗಿ ಮನವಿ

Update: 2025-07-11 22:06 IST

ಬೀದರ್ : ನಗರದ ಚಿದ್ರಿ ರೋಡ್ ನ ಭದ್ರೋದ್ದಿನ್ ಕಾಲೋನಿಯ ನಿವಾಸಿ ಕಾಣೆಯಾಗಿದ್ದು, ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ಗಾಂಧಿ ಗಂಜ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ್ಞಾನಿ ಲಕ್ಷ್ಮಣ ಮಹಿಮಾಕರ್ (66) ಎಂಬ ವ್ಯಕ್ತಿ ಜೂ.13 ರಂದು ಕಾಣೆಯಾಗಿದ್ದಾರೆ. ಇವರು 5.5 ಅಡಿ ಎತ್ತರ ಇದ್ದು, ಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಮೈ ಮೇಲೆ ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ಇವರು ಕನ್ನಡ, ಹಿಂದಿ ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಗಾಂಧಿ ಗಂಜ್ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08482-226233, 94808 03448 ಹಾಗೂ ಕಂಟ್ರೋಲ್ ರೂಮ್ ನ ದೂರವಾಣಿ ಸಂಖ್ಯೆ: 08482-226704 ಗೆ ಸಂಪರ್ಕಿಸಿ ಎಂದು ಅವರು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News