ಬೀದರ್ | ವ್ಯಕ್ತಿ ಕಾಣೆ: ಪತ್ತೆಗಾಗಿ ಮನವಿ
ಬೀದರ್ : ಭಾಲ್ಕಿ ತಾಲ್ಲೂಕಿನ ಚಳಕಾಪೂರ ಗ್ರಾಮದ ನಿವಾಸಿ ವೈಜಿನಾಥ್ ತಂದೆ ಲಾಲಪ್ಪ ಮಾಸಲ್ದಾರ್ (66) ಕಾಣೆಯಾಗಿದ್ದು, ಯಾರಿಗಾದರೂ ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ಖಟಕ ಚಿಂಚೋಳಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈಜಿನಾಥ್ ಅವರು ಆ.16 ರಂದು ಮನೆಯಿಂದ ಹೊರಗಡೆ ಹೋದವರು ಮರಳಿ ಬಾರದೆ ಕಾಣೆಯಾಗಿದ್ದಾರೆ. ಈ ಕಾಣೆಯಾದ ವ್ಯಕ್ತಿ 5 ಅಡಿ 6 ಇಂಚ್ ಎತ್ತರ ಇದ್ದು, ಸಾದಾ ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಉದ್ದ ಮುಖ ಹೊಂದಿದ್ದಾರೆ. ಬಲಗಾಲ ಪಾದದ ಹತ್ತಿರ ಅಂದಾಜು 5 ರಿಂದ 6 ಇಂಚು ಗುಳಿ ಇದ್ದು, ಮನೆಯಿಂದ ಹೊಗುವಾಗ ಮೈಮೇಲೆ ಬಿಳಿ ಬಣ್ಣದ ಖಮಿಸ್, ಬಿಳಿ ಬಣ್ಣದ ಧೊತರ ಧರಿಸಿದ್ದಾರೆ. ಇವರು ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕರೆ ಖಟಕ ಚಿಂಚೋಳಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರ ಮೊಬೈಲ್ ಸಂಖ್ಯೆ : 94808 03466, ಪೊಲೀಸ್ ವೃತ್ತ ನಿರೀಕ್ಷಕ : 94808 03432, ಪೊಲೀಸ್ ಅಧೀಕ್ಷಕ : 94808 03401, ಪೊಲೀಸ್ ಕಂಟ್ರೋಲ್ ರೂಂ ಬೀದರ ಮೊಬೈಲ್ ಸಂಖ್ಯೆ : 94808 03400, ದೂರವಾಣಿ 08482-226704 ಗೆ ಸಂಪರ್ಕಿಸುವಂತೆ ಅವರು ಕೋರಿದ್ದಾರೆ.