×
Ad

ಬೀದರ್ | ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರಿಂದ ರಸ್ತೆ ಕಾಮಗಾರಿಗೆ ಚಾಲನೆ

Update: 2025-01-27 19:59 IST

ಬೀದರ್ : ಚಟ್ಟನಳ್ಳಿ ಗ್ರಾಮದ ಮುಖ್ಯ ರಸ್ತೆಯಿಂದ ಸಿಂದೋಲ ಗ್ರಾಮದ ವರಗೆ ಸುಮಾರು 2.38 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಚಾಲನೆ ನೀಡಿದರು.

ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ದಕ್ಷಿಣ ಕ್ಷೇತ್ರದ ಗ್ರಾಮೀಣ ಪ್ರದೇಶದ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗುಣಮಟ್ಟದ ರಸ್ತೆ ಸೌಲಭ್ಯ ಒದಗಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುವೆ. ಗ್ರಾಮೀಣ ಪ್ರದೇಶದ ರಸ್ತೆಗಳು ಅಭಿವೃದ್ಧಿ ಹೊಂದಿದ್ದರೆ ಮಾತ್ರ ಕ್ಷೇತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.

ರಸ್ತೆ ಕಾಮಗಾರಿಯು ಉತ್ತಮವಾಗಿ ನಿರ್ಮಿಸಬೇಕು. ಗುಣಮಟ್ಟದ ರಸ್ತೆ ನಿರ್ಮಾಣ ಜೊತೆಗೆ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾರ್ಗಸೂಚಿ ಫಲಕಗಳು, ಸೈನ್ ಬೋರ್ಡ್ ಕೂಡ ಕಡ್ಡಾಯವಾಗಿ ಅಳವಡಿಸಬೇಕು ಎಂದು ಗುತ್ತಿಗೆದಾರ ಮತ್ತು ಅಧಿಕಾರಿಗೆ ಸೂಚಿಸಿದ ಅವರು, ಜನರು ಈ ಕಾಮಗಾರಿಯ ಮೇಲೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರದಲ್ಲಿ ರಸ್ತೆ ಹಾಳಾಗಿರುವ ಕಡೆ ಗಮನಿಸಿ ಹಂತ ಹಂತವಾಗಿ ಅನುದಾನ ಬಿಡುಗಡೆ ನೀಡಲಾಗುತ್ತದೆ. ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನಷ್ಟು ಹೆಚ್ಚು ಅನುದಾನ ತಂದು ಒಳ್ಳೆ ರಸ್ತೆಯ ನಿರ್ಮಾಣ ಮಾಡುವ ಮೂಲಕ ಜನರ ಸಂಚಾರಕ್ಕೆ ಅನುಕೂಲ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕ್ಷೇತ್ರದಲ್ಲಿ ಇನ್ನುಳಿದ ಕಾಮಗಾರಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕೆಲಸ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಭಗವಾನ್ ಸಿಂಗ್, ಗುತ್ತಿಗೆದಾರ ಪ್ರಾಕ್ಲಿನ್ ಭೋಜಪ್ಪ, ಮುಖಂಡರಾದ ಶಂಕರಪ್ಪ ಬಿರಾದಾರ್, ಘಾಳೇಪ್ಪ ಚಟ್ಟನಳ್ಳಿ, ಭೋಜಪ್ಪ ಸಿರ್ಸಿ, ಅನೀಲ್ ಬಿರಾದಾರ್, ಶಿವರಾಜ್ ಗಡಿಮನಿ, ಗುಂಡಪ್ಪ ಬುಧೇರಾ, ರಾಜರೆಡ್ಡಿ, ನಾಗೇಶ್ ಮೈಲಾರೆ, ಸಂತೋಷ್ ಟೇಲರ್, ನಯಿಮ್, ವೀರಶೆಟ್ಟಿ ಪಾಟೀಲ್, ಗುರಯ್ಯ ಸ್ವಾಮಿ, ಸೂರ್ಯಕಾಂತ್, ಪ್ರವೀಣ್ ತರಿ, ಬಸವರಾಜ್ ರೇಕುಳಗಿ, ಮಿಟ್ಟು ಸಿಂಗ್ ಹಾಗೂ ರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News