ಬೀದರ್ | 6 ಕೆ.ಜಿ ಗಿಂತ ಹೆಚ್ಚು ಗಾಂಜಾ ವಶ : ಪ್ರಕರಣ ದಾಖಲು
Update: 2025-10-23 22:41 IST
ಬೀದರ್ : ನಗರದ ರೈಲ್ವೆ ನಿಲ್ದಾಣದಿಂದ ಗಾಂಧಿ ಗಂಜ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾರ್ವಜನಿಕವಾಗಿ ಮಾರಾಟ ಮಾಡಲಾಗುತ್ತಿದ್ದ ಸುಮಾರು 6,46,800 ರೂ. ಮೌಲ್ಯದ 6 ಕೆ. ಜಿ 468 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಕಲಬುರಗಿ ಮೂಲದ ವ್ಯಕ್ತಿಯೊಬ್ಬ ಬೈಕ್ ಮೇಲೆ ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಸಮವಸ್ತ್ರದಲಿದ್ದ ಪೊಲೀಸರನ್ನು ನೋಡಿ ಗಾಂಜಾ ಖರೀದಿ ಮಾಡುವ ಸಾರ್ವಜನಿಕರು ಓಡಿದ್ದಾರೆ. ಅವರ ಜೊತೆಗೆ ಗಾಂಜಾ ಮಾರಾಟ ಮಾಡುತಿದ್ದ ವ್ಯಕ್ತಿಯು ಬೈಕ್ ಮತ್ತು ಮಾರಾಟ ಮಾಡುತ್ತಿರುವ ಗಾಂಜಾವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಘಟನೆ ವಿರುದ್ಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.