×
Ad

ಬೀದರ್ | ಪಿಯು ಪರೀಕ್ಷೆಯಲ್ಲಿ ನಾಗಭೂಷಣ ಶಿವಯೋಗಿ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ

Update: 2025-04-09 11:57 IST

ಬೀದರ್ : ಪಿಯುಸಿ ಪರೀಕ್ಷೆಯಲ್ಲಿ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ ಗ್ರಾಮದಲ್ಲಿರುವ ನಾಗಭೂಷಣ ಶಿವಯೋಗಿ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಣವಶ್ರೀ ಅಪ್ಪಾಜಿ ಅವರು ತಿಳಿಸಿದ್ದಾರೆ.

ನಾಗಭೂಷಣ ಶಿವಯೋಗಿ ಪದವಿ ಪೂರ್ವ ಕಾಲೇಜಿಗೆ ಶೇ.92 ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ವಿರೇಶ್ ಶೇ.90, ಕಲಾ ವಿಭಾಗದಲ್ಲಿ ಸಪ್ನಾ  ಶೇ.82 ಹಾಗೂ ವಾಣಿಜ್ಯ ವಿಭಾಗದಲ್ಲಿ ನಾಗರಾಜ್ ಶೇ.87 ರಷ್ಟು ಫಲಿತಾಂಶಗಳಿಸಿದ್ದಾರೆ.

ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದ್ದರಿಂದಾಗಿ ಸಂಸ್ಥೆಯ ಅಧ್ಯಕ್ಷರಾದ ಪ್ರಣವಶ್ರೀ ಅಪ್ಪಾಜಿ, ಕಾರ್ಯದರ್ಶಿ ಶಾಂತಕುಮಾರ್ ಜೊತೆಪ್ಪ, ಪ್ರಾಂಶುಪಾಲ ಶಿವಶಂಕರ್ ಕಾಮಶೆಟ್ಟಿ ಹಾಗೂ ಕಾಲೇಜಿನ ಸಿಬ್ಬಂದಿ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News