×
Ad

ಬೀದರ್ | ಸಮೀಕ್ಷೆಗೆ ನೆಟ್‌ವರ್ಕ್ ಸಮಸ್ಯೆ : ಮರ ಹತ್ತಿದ ಶಿಕ್ಷಕ !

Update: 2025-09-24 23:09 IST

ಬೀದರ್ : ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ವೇಳೆ ನೆಟ್‌ವರ್ಕ್ ಸಮಸ್ಯೆ ಎದುರಿಸಿದ ಶಿಕ್ಷಕರೊಬ್ಬರು ಮರ ಹತ್ತಿದ ಘಟನೆ ಬಸವಕಲ್ಯಾಣ ತಾಲ್ಲೂಕಿನ ಮಿರಖಲ್ ಗ್ರಾಮದಲ್ಲಿ ಬುಧವಾರ ನಡೆದಿದೆ.

ಸಮೀಕ್ಷೆಗೆ ನಿಯುಕ್ತಿಗೊಂಡಿದ್ದ ಮಿರಖಲ್ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕ ಗೋವಿಂದ ಮಹಾರಾಜ ನೆಟ್‌ವರ್ಕ್‌ಗಾಗಿ ಮರ ಹತ್ತಿದ್ದಾರೆ. ಆದರೆ, ಮರ ಹತ್ತಿದ ನಂತರವೂ ಸರಿಯಾದ ನೆಟ್‌ವರ್ಕ್‌ ಸಿಗದೆ ಮರದಿಂದ ಕೆಳಗಿಳಿದಿದ್ದಾರೆ ಎಂದು ತಿಳಿದು ಬಂದಿದೆ.

ಸೆ.22ರಿಂದ ರಾಜ್ಯ ಸರ್ಕಾರ ಸಮೀಕ್ಷೆ ಆರಂಭಿಸಿದ್ದು, ಗಡಿ ಭಾಗದಲ್ಲಿರುವ ಮಿರಖಲ್ ಗ್ರಾಮದಲ್ಲಿ ನೆಟ್‌ವರ್ಕ್‌ ಸಮಸ್ಯೆ ಹೆಚ್ಚಾಗಿ ಇರುವುದರಿಂದ ಅವರು ಮರಕ್ಕೆ ಹತ್ತಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News