ಬೀದರ್ | ಕರ್ಕಶ ಶಬ್ಧ ಮಾಡುವ ಬುಲೆಟ್ ಬೈಕ್‌ಗಳಿಗೆ ದಂಡ ; ಪೊಲೀಸರಿಂದ ಎಚ್ಚರಿಕೆ
ಬೀದರ್ : ಕರ್ಕಶ ಶಬ್ದ ಮಾಡುವಂತಹ ಬುಲೆಟ್ ಬೈಕ್ಗಳನ್ನು ವಶಕ್ಕೆ ಪಡೆದು ಡಿಫೆಕ್ಟಿವ್ ಸೈಲೆನ್ಸರ್ಗಳನ್ನು ತೆಗೆದುಹಾಕಿ, ವಾಹನದ ಮಾಲಕರಿಗೆ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಪೂಜಾರಿ, ಪೊಲೀಸ್ ಉಪಾಧೀಕ್ಷಕ ಶಿವನಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ಬಾಪುಗೌಡ ಪಾಟೀಲ್ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿ ಸೇರಿಕೊಂಡು ಕರ್ಕಶ ಶಬ್ದ ಮಾಡುವ ಬುಲೆಟ್ ಬೈಕ್ಗಳನ್ನು ವಶಕ್ಕೆ ಪಡೆದು ಡಿಫೆಕ್ಟಿವ್ ಸೈಲೆನ್ಸರ್ಗಳನ್ನು ತೆಗೆದು ಹಾಕಿದರು.
ಇದೇ ಸಮಯದಲ್ಲಿ ಕರ್ಕಶ ಶಬ್ದ ಮಾಡುವ 80 ಬೈಕ್ ಗಳ ಮಾಲಕರಿಗೆ ದಂಡ ವಿಧಿಸಲಾಗಿದ್ದು, ಬೈಕ್ ಸವಾರರಿಗೆ ಇನ್ನು ಮುಂದೆ ಇಂತಹ ಸೈಲೆನ್ಸರ್ಗಳನ್ನು ಅಳವಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬೈಕ್ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಾಗೆಯೇ ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು ಎಂದು ತಿಳಿಸಿ, ಕರ್ಕಶ ಶಬ್ದ ಮಾಡುವ ಬೈಕ್‌ಗಳು ವಶಕ್ಕೆ ಪಡೆದು ದಂಡಹಾಕುವ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಎಚ್ಚರಿಸಿದ್ದಾರೆ.