Bidar | ಸೆ. 24ರಂದು ನಿರ್ಣಾ, ಚಿಟಗುಪ್ಪಾ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬೀದರ್: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹುಮನಾಬಾದ್ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯ 110/33-11 ಕೆ.ವಿ. ಉಪ-ವಿತರಣಾ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 24ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹುಮನಾಬಾದ್ 220 ಕೆ.ವಿ. ಸ್ವೀಕರಣ ಕೇಂದ್ರದ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುರ್ತು ನಿರ್ವಹಣಾ ಕಾಮಗಾರಿಯಿಂದ ಚಿಟಗುಪ್ಪಾ ಹಾಗೂ ನಿರ್ಣಾ 110 ಕೆ.ವಿ. ವಿದ್ಯುತ್ ಉಪಕೇಂದ್ರಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಈ ಅವಧಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಲ್ಲಿ ಚಿಟಗುಪ್ಪಾ ನಗರ ಸೇರಿದಂತೆ ಶಾಮತಾಬಾದ್, ಬೆಳಕೇರಾ, ಉಡಬಾಳ್, ಕುಡಂಬುಲ್, ಇಟಗಾ, ಮುಸ್ತರಿ, ವಳಖಿಂಡಿ, ಮುತ್ತಂಗಿ, ಬಾದ್ಲಪೂರ್, ಜಾಂಗಲೇರಾ, ನಾಗನಕೇರಾ, ಬಸಲಾಪೂರ್, ಮದರಗಿ ಹಾಗೂ ತಾಳಮಡಗಿ ಮಾರ್ಗದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳು ಸೇರಿವೆ.
ನಿರ್ವಹಣಾ ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಕೆಪಿಟಿಸಿಎಲ್ ಅಧಿಕಾರಿಗಳು ಮನವಿ ಮಾಡಿದ್ದಾರೆ.