ಬೀದರ್ | ಕನ್ನಡ ಶಾಲೆಗಳನ್ನು ಉಳಿಸಲು ಕನ್ನಡ ಪರ ಸಂಘಟನೆಗಳಿಂದ ಒತ್ತಾಯ
ಬೀದರ್ : ಕರ್ನಾಟಕದಲ್ಲಿ ಕನ್ನಡ ಶಾಲೆ ಮತ್ತು ಕನ್ನಡ ಶಿಕ್ಷಣ ಅವನತಿಯತ್ತ ಸಾಗುತ್ತಿದ್ದು, ಕನ್ನಡ ಶಾಲೆಗಳು ಉಳಿಸಬೇಕು ಎಂದು ವಿವಿಧ ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.
ಇಂದು ವಿಶ್ವ ಕನ್ನಡಿಗರ ಸಂಸ್ಥೆ, ವೀರ ಕನ್ನಡಿಗರ ಸೇನೆ, ಕನ್ನಡಿಗರ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ (ಕಾವುಲುಪಡೆ) ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ, ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಇಂದಿನ ಮಾಹಿತಿ ತ್ರಂಜ್ಞಾನದ ಕಾಲದಲ್ಲಿ ಶಿಕ್ಷಣವು ವ್ಯಾಪಾರಿಕರಣವಾಗುತ್ತಿದೆ. ಕನ್ನಡ ಭಾಷೆ ಶಿಕ್ಷಣ ಕುಂಟಿತಗೊಳ್ಳುತ್ತಿದೆ. ಗಡಿ ಭಾಗದಲ್ಲಿ, ಗ್ರಾಮೀಣ ಭಾಗದಲ್ಲಿ ಕನ್ನಡ ಶಾಲೆಗಳು ಉಳಿಸಿ ಬೆಳೆಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕಿದೆ ಎಂದು ಹೇಳಲಾಗಿದೆ.
ದೇಶದ ರಾಜ್ಯ ಸರ್ಕಾರಗಳಿಗೆ ಮೂಲಭೂತ ಕರ್ತವ್ಯದಲ್ಲಿ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೆಲಸವಾಗಿದೆ. ನಿತ್ಯ ನಿರಂತರವಾಗಿ ಪ್ರತಿದಿನ ಪ್ರತಿ ಕ್ಷಣ ಶಿಕ್ಷಣ ವ್ಯಾಪಾರಿಕರಣವಾಗುತ್ತಿದೆ. ಇಂಗ್ಲಿಷ್ ಕಲಿತರೆ ಉದ್ಯೋಗ, ಕನ್ನಡ ಕಲಿತರೆ ನಿರುದ್ಯಗಿ ಎನ್ನುವ ಸಂಪ್ರದಾಯ ಜನರಲ್ಲಿ ಬೇರು ಬಿಟ್ಟಿದೆ. ಇದಕ್ಕೆ ಕಾರಣ ಕನ್ನಡ ಭಾಷೆಯಲ್ಲಿ ಕಲಿತಿರುವ ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಈ ಸಂದರ್ಭದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ರಾಜ್ಯಾಧ್ಯಕ್ಷ, ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಡಾ.ಸುಬ್ಬಣ್ಣ ಕರಕನಳ್ಳಿ, ಕರವೇ (ಕಾವುಲುಪಡೆ) ಜಿಲ್ಲಾಧ್ಯಕ್ಷ ಅವಿನಾಶ್ ಬುದೇರಾಕರ್, ಕನ್ನಡಿಗರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಕಾಂತ್ ಭವಾನಿ, ಜಿಲ್ಲಾ ಗೌರವ ಅಧ್ಯಕ್ಷ ಸುರೇಶ್ ಕನ್ನಾಳೆ, ಜಿಲ್ಲಾ ಉಪಾಧ್ಯಕ್ಷ ಆನಂದ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣಕುಮಾರ್ ಭಾಗ್ಯಾನೋರ್, ಕಾರ್ಯಯದರ್ಶಿ ವಿಜಯಕುಮಾರ್ ಮೋರ್ಗಿಕರ್, ನಗರ ಘಟಕದ ಅಧ್ಯಕ್ಷ ಸ್ಟಾಲಿನ್, ಆಕಾಶ್ ಮಠಪತಿ, ಲೊಕೇಶ್ ತರನಳ್ಳಿ, ರವಿಕುಮಾರ್ ಅಮಲಾಪೂರ್, ಈಶ್ವರ್ ಬಾಚಪಳ್ಳಿ, ಸುಜೀತಕುಮಾರ್ ಹಾಗೂ ಡಾ.ವಿಶ್ವನಾಥ್ ಗಾಯಕವಾಡ್ ಸೇರಿದಂತೆ ಇತರರು ಇದ್ದರು.