×
Ad

ಬೀದರ್ | ವಿವಿಧ ಪೊಲೀಸ್ ಠಾಣೆಯ ಕಳ್ಳತನ ಪ್ರಕರಣಗಳಲ್ಲಿ 1 ಕೋಟಿ 50 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ಜಪ್ತಿ : 57 ಮಂದಿ ಆರೋಪಿಗಳ ಬಂಧನ

Update: 2025-10-10 18:23 IST

ಬೀದರ್ : ಜಿಲ್ಲೆಯ 9 ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು 42 ಕಳ್ಳತನ ಪ್ರಕರಣಗಳಲ್ಲಿ 1,50,43,720 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು, 57 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ತಿಳಿಸಿದರು.

ಶುಕ್ರವಾರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾಲ್ಕಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾದ ಪ್ರಕರಣಗಳಲ್ಲಿ 5 ಲಕ್ಷ 32 ಸಾವಿರ ರೂ. ಕ್ಕಿಂತಲೂ ಹೆಚ್ಚು ನಗದು ಹಣ, 1 ಲಕ್ಷ 50 ಸಾವಿರ ರೂ. ಮೌಲ್ಯದ 15 ಗ್ರಾಂ ಚಿನ್ನ ಹಾಗೂ 6 ಲಕ್ಷ 50 ಸಾವಿರ ರೂ. ಮೌಲ್ಯದ ಒಂದು ಐಚರ್ ಟೆಂಪೋ ವಾಹನ ಜಪ್ತಿ ಮಾಡಲಾಗಿದೆ. ನೂತನ ನಗರ ಪೊಲೀಸ್ ಠಾಣೆಯಲ್ಲಿನ ಕಳ್ಳತನ ಪ್ರಕರಣಗಳಲ್ಲಿ 13 ಲಕ್ಷ 60 ಸಾವಿರ ರೂ. ಮೌಲ್ಯದ 18 ದ್ವಿಚಕ್ರ ವಾಹನ ಮತ್ತು 21 ಲಕ್ಷ 1 ಸಾವಿರ ರೂ. ಮೌಲ್ಯದ 191 ಗ್ರಾಂ ಚಿನ್ನ ಹಾಗೂ 61 ಸಾವಿರ 500 ರೂ. ಮೌಲ್ಯದ 410 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ ಎಂದರು.

ಹುಮನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಸುಮಾರು 54 ಲಕ್ಷ ರೂ. ಮೌಲ್ಯದ 8 ಕಾರುಗಳು, 5 ಲಕ್ಷ 67 ಸಾವಿರ ರೂ. ಮೌಲ್ಯದ 114 ಗ್ರಾಂ ಚಿನ್ನ, ಸುಮಾರು 15 ಸಾವಿರ ರೂ. ಮೊತ್ತದ 24 ತೊಲೆ 7 ಗ್ರಾಂ ಬೆಳ್ಳಿ, ಸುಮಾರು 12 ಲಕ್ಷ 98 ಸಾವಿರ ರೂ. ನಗದು ಹಣ ಹಾಗೂ 4 ಬೈಕ್ ಸೇರಿದಂತೆ ಇತರೆ ವಸ್ತುಗಳು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಜನವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ 4 ಲಕ್ಷಕ್ಕಿಂತ ಅಧಿಕ ಮೌಲ್ಯದ ವಸ್ತುಗಳು, ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಪ್ರಕರಣಗಳಲ್ಲಿ ಸುಮಾರು 70 ಸಾವಿರ ರೂ. ಮೌಲ್ಯದ ವಸ್ತುಗಳು, ಔರಾದ್ (ಬಿ) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳಲ್ಲಿ 2 ಲಕ್ಷ 15 ಸಾವಿರ ರೂ. ಮೌಲ್ಯದ ವಸ್ತು, ಹೊಕ್ರಾಣಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳಲ್ಲಿ ಸುಮಾರು 2 ಲಕ್ಷ 98 ಸಾವಿರ ರೂ. ಮೌಲ್ಯದ ವಸ್ತು ಹಾಗೆಯೇ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳಲ್ಲಿ 8 ಲಕ್ಷ 40 ಸಾವಿರ ರೂ. ಮೌಲ್ಯದ 105 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

2-3 ತಿಂಗಳ ಅವಧಿಯಲ್ಲಿ ಹೀಗೆ ಒಟ್ಟು 9 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ 1,50,43,720 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು, 57 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News