×
Ad

ಬೀದರ್ | ಬಾಣಂತಿಯರ ಸರಣಿ ಸಾವಿನ ವಿರುದ್ಧ ಪ್ರತಿಭಟನೆ

Update: 2025-02-03 17:31 IST

ಬೀದರ್ : ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವುಗಳ ವಿರುದ್ಧ ಕರ್ನಾಟಕ ಡ್ರಗ್ ಆಕ್ಷೇನ್ ಫೋರಂ ಹಾಗೂ ಸಾರ್ವತ್ರಿಕ ಆಂದೋಲನ ಕರ್ನಾಟಕದ ನೇತೃತ್ವದಲ್ಲಿ ಜಾಥಾ ಪ್ರಾರಂಭ ಮಾಡುತಿದ್ದೇವೆ ಎಂದು ಡ್ರಗ್ ಆಕ್ಷೇನ್ ಫೋರಂನ ಅಧ್ಯಕ್ಷ ಡಾ.ಗೋಪಾಲ್ ದಾಬಡೆ ತಿಳಿಸಿದ್ದಾರೆ.

ಇಂದು ನೂರಾರು ಮಹಿಳೆಯರು ಹಾಗೂ ತೃತೀಯ ಲಿಂಗಿಯರು ಸೇರಿ ನಗರದ ಗಣೇಶ್ ಮೈದಾನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಜಾಥಾ ಪ್ರಾರಂಭ ಮಾಡಲಾಯಿತು.

ಗೋಪಾಲ್ ದಾಬಡೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಾಣಂತಿಯರ ಸಾವಿಗೆ ಕಳಪೆ ಮಟ್ಟದ ಔಷಧಿಯೇ ನೇರ ಕಾರಣವಾಗಿದೆ. ವಿಷವಿರುವ ಔಷಧಿಗಳು ನಮ್ಮ ಸರಕಾರಿ ಆಸ್ಪತ್ರೆಯಲ್ಲಿ ವಿತರಿಸಲಾಗುತ್ತಿದೆ. ಇಲ್ಲಿ ಯಾವುದೇ ರೀತಿಯ ಔಷಧಿಗಳ ಪರೀಕ್ಷೆ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಈ ಸಾವುಗಳನ್ನು ತಡೆಗಟ್ಟುವುದಕ್ಕೆ ಸಾಧ್ಯವಿದೆ ಎನ್ನುವುದು ತಮಿಳುನಾಡು, ರಾಜಸ್ಥಾನ ಹಾಗೂ ಕೇರಳ ರಾಜ್ಯಗಳೇ ಉದಾಹರಣೆಯಾಗಿದೆ. ಅಲ್ಲಿ ಪ್ರತಿ ಬ್ಯಾಚ್ ನ ಔಷಧಿಗಳು ಪರೀಕ್ಷೆಗೆ ಒಳಪಡಿಸುತ್ತಾರೆ. ಅದರ ಫಲಿತಾಂಶ ಬರುವವರೆಗೂ ಆ ಔಷಧಿ ರೋಗಿಗಳಿಗೆ ನೀಡುವುದಿಲ್ಲ. ಪರೀಕ್ಷೆಗೊಳಪಡಿಸಿದ ಔಷಧಿಯ ಫಲಿತಾಂಶ ಬಂದ ನಂತರವೇ ಅದು ಅಲ್ಲಿನ ರೋಗಿಗಳಿಗೆ ನೀಡಲಾಗುತ್ತದೆ. ಆ ಪದ್ಧತಿ ನಮ್ಮ ರಾಜ್ಯದಲಿಲ್ಲ. ಅದೇ ರೀತಿಯ ಪದ್ಧತಿ ನಮ್ಮ ರಾಜ್ಯದಲ್ಲಿಯೂ ಕೂಡ ತರಬೇಕು ಎಂದು ಆಗ್ರಹಿಸಿದರು.

ಈ ಜಾಥಾವು ಗುಲ್ಬಾರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರದ ಮೂಲಕ ಸಾಗಿ ಫೆ.14 ರಂದು ಬೆಂಗಳೂರಲ್ಲಿ ಕೊನೆಗೂಳ್ಳುತ್ತದೆ ಎಂದು ಮಾಹಿತಿ ನೀಡಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಗುಣಮಟ್ಟ ಸಂಪೂರ್ಣವಾಗಿ ಖುಸಿದಿದ್ದು, ಅಲ್ಲಿನ ವೈದ್ಯರು ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಮಾಡಿಕೊಳ್ಳಲು ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಬಡವರಿಗೆ ಗುಣಮಟ್ಟದ ಚಿಕಿತ್ಸೆ ಸಿಗದೇ ಸಾಯುವ ಪರಿಸ್ಥಿತಿ ಎದುರಾಗಿದೆ. ಎಲ್ಲ ರೀತಿಯ ರೋಗಿಗಳಿಗೆ ಸರಕಾರಿ ಆಸ್ಪತ್ರೆಯಲ್ಲಿಯೇ ಎಲ್ಲ ರೀತಿಯ ಚಿಕಿತ್ಸೆ ಉಚಿತವಾಗಿ ದೊರಕುವ ಹಾಗೆ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ರಾಜಕುಮಾರ್, ಮಹೇಶ್ ಪಾಟೀಲ್, ಸಪ್ನದೀಪಾ, ರೇಷ್ಮಾ, ಭೀಮ್ ಮಸೂಡೆ ಹಾಗೂ ಶೆಕುಂತಲಾ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News