ಬೀದರ್ | ಸಿಜೆಐ ಮೇಲೆ ಶೂ ಎಸೆದ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ
ಬೀದರ್ : ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ಆರೋಪಿ ಕಿಶೋರ್ ರಾಕೇಶ್ ರನ್ನು ಕಠಿಣ ಶಿಕ್ಷೆಗೊಳಪಡಿಸಲು ಆಗ್ರಹಿಸಿ ದಲಿತ ಪರ ಸಂಘಟನೆಗಳ ಒಕ್ಕೂಟ ಸಮಿತಿಯಿಂದ ಭಾಲ್ಕಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಶುಕ್ರವಾರ ಭಾಲ್ಕಿ ನಗರದ ಬೌದ್ಧ ವಿಹಾರದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಮಹಾತ್ಮಾ ಗಾಂಧಿ ವೃತ ಹಾಗೂ ಬಸವೇಶ್ವರ್ ವೃತ್ತದ ಮಾರ್ಗವಾಗಿ ತಹಶೀಲ್ದಾರ್ ಕಚೇರಿಗೆ ಬಂದು ತಲುಪಿತು. ಪ್ರತಿಭಟನೆಯಲ್ಲಿ ಶೂ ಎಸೆದ ವಕೀಲನ ವಿರುದ್ಧ ಘೋಷಣೆ ಕೂಗಲಾಯಿತು.
ಸಿಜೆಐ ಬಿ. ಆರ್. ಗವಾಯಿ ಅವರು ಸುಪ್ರೀಂ ಕೋರ್ಟ್ ನ್ಯಾಯ ಪೀಠದ ಮೇಲೆ ಕುಳಿತುಕೊಂಡು ವಿಚಾರಣೆ ಮಾಡುವಾಗ ಒಬ್ಬ ನೀಚ ಮನಸ್ಥಿತಿಯುಳ್ಳ ಕಿಶೋರ್ ರಾಕೇಶ್ ಎನ್ನುವ ವಕೀಲ ಶೂ ಎಸೆದು ಹಲ್ಲೆ ಮಾಡಲು ಯತ್ನಿಸಿರುವುದು ಅತ್ಯಂತ ನೀಚ, ಅಸಭ್ಯ ಮತ್ತು ಸಂವಿಧಾನದ ವಿರುದ್ಧ ಕೃತ್ಯವಾಗಿದ್ದು, ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದು ಅಕ್ಷಮ್ಯ ಅಪರಾಧವಾಗಿದೆ. ಆರೋಪಿಯನ್ನು ಕಾನೂನಿನ ಅಡಿಯಲ್ಲಿ ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ವಿಲಾಸ್ ಮೋರೆ, ವಿಜಯಕುಮಾರ್ ಗಾಯಕವಾಡ್, ಓಂಕಾರ್ ಮೊರೆ, ಪ್ರಶಾಂತ್ ಬಾವಿಕಟ್ಟೆ , ಮನೋಹರ್ ಮೊರೆ, ಮಾರುತಿ ಬಾವಿ ಕಟ್ಟೆ, ಸಂಜುಕುಮಾರ್ ಬಾವಿಕಟ್ಟೆ , ಅಶೋಕ್ ಗಾಯಕವಾಡ್, ಓಂಕಾರ್ ಮೋರೆ, ಮಾರುತಿ ಬಂಗಾರೆ, ಕೈಲಾಸ್ ಬಾವಿಕಟ್ಟೆ, ಶಿವಕುಮಾರ್ ಬಂಗಾರೆ, ಕೀರ್ತಿರತನ್ ಸೋನಾಳೆ, ನಾರಾಯಣರಾವ್ ಮೊರೆ, ಧನರಾಜ್ ಕುಂದೆ, ರಾಜಕುಮಾರ್ ಬೌದ್ದೆ, ಜೈಪಾಲ್ ಬೋರಾಳೆ, ತುಕಾರಾಂ ದೊಡ್ಡಿ, ನರ್ಸಿಂಗ್ ಲಂಜವಾಡ್, ರಾಜಕುಮಾರ್ ಚೆಲ್ವಾ, ಕಲ್ಲಪ್ಪ ಮೋಳಕೆರೆ, ಪ್ರದೀಪ್ ಗುಪ್ತಾ, ರವಿ ಚೆಲ್ವಾ, ಪರಮೇಶ್ ದಂಡೆ, ಅಶೋಕ್ ಸಾನೇ, ಸಚಿನ್ ಅಂಬಿಸಿಂಗಿ ಹಾಗೂ ಶ್ರೀಮಂತ್ ಬೋಸ್ಲೆ ಸೇರಿದಂತೆ ಸಮತಾ ಸೈನಿಕ ದಳದ ಪದಾಧಿಕಾರಿಗಳು ಮತ್ತು ಅನೇಕರು ಉಪಸ್ಥಿತರಿದ್ದರು.