×
Ad

ಬೀದರ್ | ಜಿಲ್ಲೆಯ ಹಳೇ ಬಸ್ ನಿಲ್ದಾಣದಲ್ಲಿ ಬೈಕ್ ಸ್ಟಾಂಡ್ ಸ್ಥಾಪಿಸಲು ಮನವಿ

Update: 2025-07-22 16:50 IST

ಬೀದರ್ : ನಗರದಿಂದ ಮನ್ನಾ ಏಖ್ಖೇಳ್ಳಿ, ಚಿಂಚೋಳಿ, ಸೇಡಂ, ಭೂಂಯಾರ್, ಯಾದಗಿರಿ, ಗುರುಮಿಟಕಲ್, ಪೌರಾದೇವಿ, ಮಂತ್ರಾಲಯ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಹೊರಡುವ ಎಕ್ಸ್‌ಪ್ರೆಸ್, ತಡೆರಹಿತ ಹಾಗೂ ಇತರ ಬಸ್ಸುಗಳು ಹಳೇ ಬಸ್ ನಿಲ್ದಾಣದಿಂದಲೇ ಹೊರಡುವುದರಿಂದ ಈ ನಿಲ್ದಾಣದಲ್ಲಿ ಬೈಕ್ ನಿಲ್ದಾಣ ಸ್ಥಾಪಿಸಬೇಕು ಎಂದು ವೀರಭದ್ರಪ್ಪ ಉಪ್ಪಿನ್ ಅವರು ಮನವಿ ಮಾಡಿದ್ದಾರೆ.

ಬೀದರ್ ನಗರದ ಬಹುತೇಕ ಪ್ರಯಾಣಿಕರು ಈ ಬಸ್ ನಿಲ್ದಾಣದಿಂದಲೇ ಪ್ರಯಾಣಿಸುತ್ತಾರೆ. ದೂರದ ಪ್ರಯಾಣ ಕೈಗೊಳ್ಳುವವರಿಗೆ ತಮ್ಮ ದ್ವಿಚಕ್ರ ವಾಹನ, ಕಾರು ನಿಲ್ಲಿಸಲು ಬೈಕ್ ನಿಲ್ದಾಣ ಇಲ್ಲ. ಪ್ರಯಾಣಿಕರು ತಮ್ಮ ಬೈಕ್ ಗಳನ್ನು ಬಸ್ ನಿಲ್ದಾಣದ ಆವರಣದಲ್ಲಿ ಕಾವಲುಗಾರರಿಲ್ಲದ ಸ್ಥಳದಲ್ಲಿಯೇ ನಿಲ್ಲಿಸುವುದು ಅನಿವಾರ್ಯವಾಗಿದೆ. ಇದು ಬೈಕ್ ಕಳ್ಳತನಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಹಳೆ ಬಸ್ ನಿಲ್ದಾಣದಲ್ಲಿ ಬೈಕ್ ಸ್ಟಾಂಡ್ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News