ಬೀದರ್ | ಮನೆ ಮನೆಗೆ ಅಂಬೇಡ್ಕರ್ ಅಭಿಯಾನದ ಮೂಲಕ ಅರಿವು ಮೂಡಿಸಲು ತಿರ್ಮಾನ : ಮಹೇಶ್ ಗೋರನಾಳಕರ್
ಬೀದರ್ : ಮನೆ ಮನೆಗೆ ಅಂಬೇಡ್ಕರ್ ಅಭಿಯಾನದ ಮೂಲಕ ಮಹಿಳೆಯರು, ಯುವಕರು, ಯುವತಿಯರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಹೇಶ್ ಗೋರನಾಳಕರ್ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮನೆ ಮನೆಗೆ ಅಂಬೇಡ್ಕರ್ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಅಭಿಯಾನದ ಮೂಲಕ ಪ್ರತಿಯೊಬ್ಬರ ಮನೆಗೆ ತೆರಳಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ವಿಚಾರಗಳನ್ನು ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌಧ್ದೆ ಮಾತನಾಡಿ, ಮನೆ ಮನೆಗೆ ಅಂಬೇಡ್ಕರ್ ಅಭಿಯಾನದ ಮೂಲಕ ಮಹಿಳೆಯರು, ಯುವಕರು ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ವೈಜ್ಞಾನಿಕ, ಧಾರ್ಮಿಕ, ಸಾಂಸ್ಕೃತಿಕ, ವೈಚಾರಿಕ ಹಾಗೂ ರಾಜಕೀಯ ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ಈ ಅಭಿಯಾನ ಯಶಸ್ವಿಯಾಗಲು ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಹೇಳಿದರು.
ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ವಿನಯ್ ಮಾಳಗೆ ಅವರು, ಜಾತಿ ಜನಗಣತಿ ಸಮೀಕ್ಷೆಯಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು ಕಡ್ಡಾಯವಾಗಿ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ಬರೆಸುವ ಕುರಿತು ಪತ್ರಿಕೆ, ಸುದ್ದಿ ವಾಹಿನಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸುವುದು ಅಗತ್ಯ. ಈ ಅಭಿಯಾನ ಯಶಸ್ವಿಯಾದರೆ ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಹಿರಿಯ ಸಾಹಿತಿ ಡಾ. ಕಾಶಿನಾಥ್ ಚೆಲ್ವಾ, ಜ್ಞಾನೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಶರಥ್ ಗುರು, ದಸಂಸ ವಿಭಾಗೀಯ ಸಂಚಾಲಕ ರಾಜಕುಮಾರ್ ಬನ್ನೇರ್, ಜಿಲ್ಲಾ ಸಂಚಾಲಕ ರಮೇಶ್ ಸಾಗರ್, ವಿಜಯಕುಮಾರ್ ಭಾವಿಕಟ್ಟಿ, ದಲಿತ ಯೂನಿಟಿ ಮೂವ್ಮೆಂಟ್ ರಾಜ್ಯಾಧ್ಯಕ್ಷ ಪ್ರಕಾಶ್ ರಾವಣ, ಹಾಗೂ ಪ್ರಮುಖರಾದ ಭಗವಂತ್ ಫುಲೆ, ಕಂಟೆಪ್ಪಾ ಪೂಜಾರಿ, ಅಮರ್ ಅಲ್ಲಾಪೂರ್, ಗೌತಮ್ ಬಗದಲಕರ್, ಹರ್ಷಿತ್ ದಾಂಡೆಕರ್, ಶ್ರೀಧರ್ ಸೋಮನೋರ್, ಪ್ರಕಾಶ್ ನಾಗರಕಟ್ಟಿ, ಶರಣು ಫುಲೆ, ರಾಜಕುಮಾರ್ ಪ್ರಸಾದೆ, ಗೌತಮ್ ಸಿ.ಎಂ, ಲೊಕೇಶ್ ಕಾಂಬಳೆ, ಸಿದ್ದಾರ್ಥ ನಾಟೇಕರ್, ಧರ್ಮಾನಂದ್ ಶಿಂಧೆ, ರವಿ ಕೋಟೆರ್, ಪಂಡಿತ್ ಕೋಟೆರ್, ಅವಿನಾಶ್ ಮಂದಕನಳ್ಳಿ, ಧನರಾಜ್ ಯಾಕತಪೂರ್ ಹಾಗೂ ಕೃಷ್ಣ ಭೂತಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.