×
Ad

ಬೀದರ್ | ರಸ್ತೆ ಅಪಘಾತ ಪ್ರಕರಣ; ಆರೋಪಿಗೆ 6 ತಿಂಗಳು ಜೈಲು ಶಿಕ್ಷೆ, ದಂಡ

Update: 2025-03-01 19:05 IST

ಬೀದರ್ : ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಧೀಶರಾದ ಅಲ್ತಾಫ್ ಹುಸೇನ್ ಅವರು ಗುರುವಾರ 6 ತಿಂಗಳು ಜೈಲು ಶಿಕ್ಷೆ ಹಾಗೂ 11,500 ರೂ. ದಂಡ ವಿಧಿಸಿದ್ದಾರೆ.

ಬಾಲಕೃಷ್ಣ  (39) ಶಿಕ್ಷೆಗೆ ಗುರಿಯಾದ ಆರೋಪಿ.

2022 ರ ಅ.5 ರಂದು ಸಾಯಂಕಾಲ ಸುಮಾರು 7 ಗಂಟೆಗೆ ಹುಮನಾಬಾದ್, ಕಲಬುರಗಿ ರಸ್ತೆ ಮೇಲೆ ಮುಸ್ತಾಪೂರದ ಮದರಸಾಬ್ ದರ್ಗಾ ಆರೋಪಿಯು ನಿಷ್ಕಾಳಜಿತನದಿಂದ ಅತೀ ವೇಗವಾಗಿ ವಿಮೆ ಮಾಡದ ಕಾರು ಚಲಾಯಿಸಿಕೊಂಡು ಬಂದು ಪಾದಚಾರಿ ಮಚೆಂದ್ರ ಎಂಬುವವರನ್ನು ಢಿಕ್ಕಿ ಹೊಡೆದಿದ್ದನು. ಪರಿಣಾಮವಾಗಿ ಮಚೆಂದ್ರ ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಟಗುಪ್ಪ ಪೊಲೀಸ್ ನೀರಿಕ್ಷಕರು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News