×
Ad

ಬೀದರ್ | ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಡಿಎಸ್ಎಸ್ ಸಂಘಟನೆಯ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ

Update: 2025-01-26 19:40 IST

ಬೀದರ್ : ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಡಿಎಸ್ಎಸ್ ಸಂಘಟನೆಯ ಬಸವಕಲ್ಯಾಣ ಹಾಗೂ ಹುಲಸೂರ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದು ಡಿಎಸ್ಎಸ್ ಜಿಲ್ಲಾ ಸಂಚಾಲಕ ಬಾಬುರಾವ್ ಪಾಸ್ವಾನ್ ಹೇಳಿದ್ದಾರೆ.

ಇಂದು ನಗರದ ಬರೀದ್ ಷಾ ಮಯೂರಾ ಹೋಟೆಲ್ ನಲ್ಲಿ ಹಮ್ಮಿಕೊಂಡಿರುವ ʼದಲಿತ ಚಳುವಳಿ ಪುನಶ್ಚೇತನ ಮತ್ತು ಮುಂದಿನ ಸವಾಲುಗಳುʼ ಎಂಬ ಸಭೆಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ನಮ್ಮ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹಾಗೂ ಗ್ರಾಮದ ದಲಿತ, ಹಿಂದುಳಿದವರು ಸಂವಿಧಾನಾತ್ಮಕವಾದ ಹಕ್ಕುಗಳು ಪಡೆಯಲು ನಿರಂತರ ಹೋರಾಟ ನಡೆಸಬೇಕಾಗಿದೆ. ಯುವಕರನ್ನು ಸಂಘಟಿಸುವ ಉದ್ದೇಶದಿಂದ ಇಂದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದರು.

ಬಸವಕಲ್ಯಾಣ ತಾಲೂಕು ಸಂಚಾಲಕರಾಗಿ ಪಿಂಟು ಕಾಂಬಳೆ, ಸಂಘಟನಾ ಸಂಚಾಲಕರಾಗಿ ಅರುಣ ಗಾಯಕವಾಡ್ ಹಾಗೂ ಹುಲಸೂರ ತಾಲ್ಲೂಕು ಸಂಚಾಲಕರಾಗಿ ದೇವಾನಂದ್ ತೋಳೆ ಇವರನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಸಂಚಾಲಕ ರವಿ ವಾಘಮಾರೆ, ಜಿಲ್ಲಾ ಸಂಘಟನಾ ಸಂಚಾಲಕ ರಾಜಕುಮಾರ್ ಶೇರಿಕಾರ್, ಶಿವರಾಜ್ ಲಾಡಕರ್, ಜೀವನ್ ಬುಡ್ತಾ, ಮೋಘಲಪ್ಪ ಮಾಳಗೆ, ಸಂಘಟನೆಯ ಬೀದರ್ ನಗರ ಅಧ್ಯಕ್ಷ ನಾಗೇಶ ಭಾವಿಕಟ್ಟಿ, ಭಾಲ್ಕಿ ತಾಲ್ಲೂಕಾ ಸಂಚಾಲಕ ಶಿವಕುಮಾರ್ ಮೇತ್ರೆ, ಔರಾದ್ ತಾಲ್ಲೂಕಾ ಸಂಚಾಲಕ ಸುಭಾಷ್ ಲಾಧಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News