ಬೀದರ್ | ಸಿದ್ದರಾಮಯ್ಯ ನಿಜವಾದ ಅರ್ಬನ್ ನಕ್ಸಲ್ : ಮಾಜಿ ಸಚಿವ ಭಗವಂತ್ ಖೂಬಾ
ಬೀದರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಬನ್ ನಕ್ಸಲ್ ತರಹ ವ್ಯವಹಾರ ಮಾಡುತ್ತಿದ್ದಾರೆ. ನಿಜವಾಗಲೂ ಅರ್ಬನ್ ನಕ್ಸಲ್ ಎಂದು ಯಾರನ್ನಾದರೂ ಕರೆಯಬೇಕಾದರೆ ಅದು ಸಿದ್ದರಾಮಯ್ಯನವರಿಗೆ ಕರೆಯಬೇಕು ಎಂದು ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬಾ ಟೀಕಿಸಿದ್ದಾರೆ.
ರವಿವಾರ ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಸಂವಿಧಾನ ದೇಶದಲ್ಲಿ ಬರೀ 6 ಧರ್ಮಗಳಿಗೆ ಧರ್ಮದ ಮಾನ್ಯತೆ ನೀಡಿದೆ. 5 ಧರ್ಮಗಳು ಬಿಟ್ಟು ಹಿಂದೂ ಧರ್ಮದ ಎಲ್ಲರೂ ಜಾತಿ ಕಾಲಂನಲ್ಲಿ ಏನಾದರೂ ಬರೆಸಿದರು ಕೂಡ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸುತ್ತಾ ಬಂದಿದ್ದೇವೆ. ಇವಾಗಲೂ ಕೂಡ ಹಿಂದೂ ಎಂತಲೇ ಬರೆಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಶಾಸಕ ಶೈಲೆಂದ್ರ ಬೆಲ್ದಾಳೆ ಶಾಸಕ ಪ್ರಭು ಚೌವ್ಹಾಣ್ ಮಾತನಾಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಈಶ್ವರ್ ಸಿಂಗ್ ಠಾಕೂರ್, ಗುರುನಾಥ್ ಜಾಂತಿಕರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಪಾಟೀಲ್, ಬೀರಪ್ಪ ಔರಾದೆ, ವೀರಣ್ಣ ಕಾರಬಾರಿ,ಬಸವರಾಜ ಪವಾರ್, ಶ್ರೀನಿವಾಸ್ ಚೌಧರಿ ಹಾಗೂ ಗುರುನಾಥ್ ರಾಜಗೀರಾ ಇತರರು ಇದ್ದರು.