ಬೀದರ್ | ವಿದ್ಯಾರ್ಥಿಗಳು ಧನಾತ್ಮಕವಾಗಿ ಯೋಚನೆ ಮಾಡಬೇಕು : ಡಾ.ಕಿರಣ್ ಎಮ್.ಪಾಟೀಲ್
ಬೀದರ್ : ವಿದ್ಯಾರ್ಥಿಗಳು ಯಾವಾಗಲೂ ಧನಾತ್ಮಕವಾಗಿ ಯೋಚನೆ ಮಾಡಬೇಕು. ಜೀವನದಲ್ಲಿ ಯಾವುದೇ ಸಮಸ್ಯೆಗಳಿಗೊಳಗಾದಾಗ ಟೋಲ್ ಫ್ರೀ ನಂಬರ್ 14416 ಗೆ ಕರೆ ಮಾಡಿ ಸಲಹೆ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಕಿರಣ್ ಎಮ್.ಪಾಟೀಲ್ ಅವರು ಹೇಳಿದರು.
ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ ಹಾಗೂ ಬಸವ ಪದವಿ ಪೂರ್ವ ಕಾಲೇಜು ಬೀದರ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮಹಾತ್ಮ ಪುರುಷರ, ಧರ್ಮಗುರುಗಳ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ, ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮನೋವೈದ್ಯಾಧಿಕಾರಿ ಡಾ.ಅಮಲ್ ಶರಿಫ್ ವಿಶೇಷ ಉಪನ್ಯಾಸ ನೀಡಿ, ಆಧುನಿಕ ಯುಗದಲ್ಲಿ ಯುವಜನತೆ ಅತಿಯಾಗಿ ಮೊಬೈಲ್ ಮತ್ತು ಇಂಟರ್‌ನೆಟ್‌ನಿಂದ ಅನೇಕ ವಿದ್ಯಾರ್ಥಿಗಳು ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಹಾಗೆಯೇ ಅದರಿಂದ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಒಳಗಾಗಿ ತಮ್ಮ ಅಮೂಲ್ಯವಾದ ಜೀವನ ನಾಶಮಾಡಿಕೊಳ್ಳುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಿಎಚ್‌ಸಿ ಮುಖ್ಯ ವೈದ್ಯಾಧಿಕಾರಿ ಡಾ ವೈಶಾಲಿ ಮಾತನಾಡಿದರು.
ಜಿಲ್ಲಾ ಆನೆ ಕಾಲು ರೋಗ ನಿಯಂತ್ರಣ ಘಟಕದ ಆರೋಗ್ಯ ನಿರೀಕ್ಷಣಾಧಿಕಾರಿ ವಿರಶಟ್ಟಿ ಚನ್ನಶೇಟ್ಟೆ, ಜಿಲ್ಲಾ ಮಾನಸಿಕ ವಿಭಾಗದ ಮನೋಶಾಸ್ತ್ರಜ್ಞ ಮಲ್ಲಿಕಾರ್ಜುನ್ ಗುಡ್ಡೆ, ಬಸವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಲಿಂಗ್ ಬೋರಳೆ, ಸವಿತಾ ಬೋರಳೆ, ಮೌನೆಶ್ವರಿ, ಪರಶುರಾಮ್ ಸಿಂಧೆ, ಶಿವರಾಜ್, ಅನೀಲಕುಮಾರ್, ಜ್ಯೋತಿ, ಭ್ರಮಾರಂಬಾದೇವಿ, ಸಿಮಪ್ಪಾ ಸರಕೂರೆ ಹಾಗೂ ರೇಣುಕಾ ಸೇರಿದಂತೆ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.